ADVERTISEMENT

ಎಲ್‌ಆ್ಯಂಡ್‌ಟಿ ವಶಕ್ಕೆ ಮೈಂಡ್‌ಟ್ರೀನ ಶೇ 25.94 ಷೇರು

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST
   

ನವದೆಹಲಿ: ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ), ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀನ 1,628 ಷೇರುಗಳನ್ನು ಮಂಗಳವಾರ ಖರೀದಿಸಿದೆ.

ಎಲ್‌ಆ್ಯಂಡ್‌ಟಿ ಸಂಸ್ಥೆಯು ₹10 ರ ಮುಖಬೆಲೆಯ 1,168 ಷೇರುಗಳನ್ನು ಪ್ರತಿ ಷೇರಿಗೆ ₹ 972ರಂತೆ ಖರೀದಿ ಮಾಡಿದೆ ಎಂದು ಮೈಂಡ್‌ಟ್ರೀ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಇದರಿಂದ ಮೈಂಡ್‌ಟ್ರೀನಲ್ಲಿ ಸಂಸ್ಥೆಯು ಒಟ್ಟಾರೆ ಶೇ 25.94ರಷ್ಟು ಷೇರುಪಾಲು ಹೊಂದಿದಂತಾಗಿದೆ.

ಸೆಬಿ ನಕಾರ: ಎಲ್‌ಆ್ಯಂಡ್‌ಟಿ ಸಂಸ್ಥೆಯು ಮೈಂಡ್‌ಟ್ರೀನಲ್ಲಿನ ಶೇ 66ರಷ್ಟು ಷೇರುಗಳನ್ನು ₹ 10,800 ಕೋಟಿಗೆ ಖರೀದಿಸಲು ಉದ್ದೇಶಿಸಿದೆ.

ADVERTISEMENT

ಮಂಗಳವಾರದಿಂದ ಇದೇ 27ರ ವರೆಗೆ ಮುಕ್ತ ಮಾರುಕಟ್ಟೆ ವಹಿವಾಟಿನಲ್ಲಿ ಷೇರುಗಳನ್ನು ಖರೀದಿಸಲು ಮುಂದಾಗಿತ್ತು. ಆದರೆ, ಎಲ್‌ಆ್ಯಂಡ್‌ಟಿಯಿಂದ ಕೆಲವು ಸ್ಪಷ್ಟನೆಗಳನ್ನು ನೀಡುವಂತೆ ಕೇಳಿರುವ ‘ಸೆಬಿ’, ಅನುಮತಿಗೆ ನಿರಾಕರಿಸಿದೆ. ಹೀಗಾಗಿ ಷೇರು ಖರೀದಿ ನಿರ್ಧಾರವನ್ನು 15 ದಿನಗಳವರೆಗೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.