ADVERTISEMENT

ಎಲ್‌ಆ್ಯಂಡ್‌ಟಿ ಮುಕ್ತಕೊಡುಗೆ ನ್ಯಾಯೋಚಿತ ಮೈಂಡ್‌ಟ್ರೀ

ಪಿಟಿಐ
Published 12 ಜೂನ್ 2019, 17:09 IST
Last Updated 12 ಜೂನ್ 2019, 17:09 IST

ನವದೆಹಲಿ: ಎಲ್‌ಆ್ಯಂಡ್‌ಟಿ ಪ್ರಸ್ತಾಪಿಸಿರುವ ₹ 5,030 ಕೋಟಿ ಮುಕ್ತ ಕೊಡುಗೆಯು ನ್ಯಾಯೋಚಿತವಾಗಿದೆ ಎಂದು ಮೈಂಡ್‌ಟ್ರೀ ಕಂಪನಿಯ ಸ್ವತಂತ್ರ ನಿರ್ದೇಶಕರ ಸಮಿತಿಯು ಅಭಿಪ್ರಾಯಪಟ್ಟಿದೆ.

ಜೂನ್‌ 10ರಂದು ಷೇರುಪೇಟೆಗಳ ವಹಿವಾಟಿನ ಅಂತ್ಯದಲ್ಲಿ ಮೈಂಡ್‌ಟ್ರೀನ ಪ್ರತಿ ಷೇರಿನ ಬೆಲೆ ಎನ್‌ಎಸ್‌ಇನಲ್ಲಿ ₹ 975.50 ಮತ್ತು ಬಿಎಸ್‌ಇನಲ್ಲಿ₹ 974.65 ಇತ್ತು.ಎಲ್‌ಆ್ಯಂಡ್‌ಟಿ ನೀಡಿರುವ ಕೊಡುಗೆಗಿಂತಲೂ(ಪ್ರತಿ ಷೇರಿಗೆ ₹ 980) ಕಂಪನಿಯ ಷೇರಿನ ಬೆಲೆ ಕಡಿಮೆ ಇರುವುದರಿಂದ ಈ ಮುಕ್ತ ಕೊಡುಗೆಯ ದರವು ಸಮಂಜಸವಾಗಿದೆ ಎಂದು ಸಮಿತಿ ಹೇಳಿದೆ.

ಎಲ್‌ಆ್ಯಂಡ್‌ಟಿ ಕೊಡುಗೆಗೆ ಮೈಂಡ್‌ಟ್ರೀನ ಸಹ ಸ್ಥಾಪಕರು ವಿರೋಧ ವ್ಯಕ್ತಪಡಿಸಿದ್ದರಿಂದ ಕೊಡುಗೆಯ ಬಗ್ಗೆ ವರದಿ ನೀಡಲು ಕಂಪನಿಯು ಸ್ವತಂತ್ರ ನಿರ್ದೇಶಕರ ಸಮಿತಿಯನ್ನು ರಚಿಸಿತ್ತು.

ADVERTISEMENT

ಮೈಂಡ್‌ಟ್ರೀನಲ್ಲಿ ಶೇ 31ರಷ್ಟು ಷೇರುಗಳನ್ನು ವಶಕ್ಕೆ ಪಡೆಯಲು₹ 5,030 ಕೋಟಿ ಮುಕ್ತ ಕೊಡುಗೆಯನ್ನು ಎಲ್‌ಆ್ಯಂಡ್‌ಟಿ ಮುಂದಿಟ್ಟಿತ್ತು.

ಮೈಂಡ್‌ಟ್ರೀನ ಶೇ 28.90ರಷ್ಟು ಷೇರುಗಳನ್ನು ಈಗಾಗಲೇ ವಶಕ್ಕೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.