ADVERTISEMENT

ಮೈಂಡ್‌ಟ್ರೀ ಲಾಭ ₹ 254 ಕೋಟಿ

ಪಿಟಿಐ
Published 15 ಅಕ್ಟೋಬರ್ 2020, 16:34 IST
Last Updated 15 ಅಕ್ಟೋಬರ್ 2020, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐ.ಟಿ. ಕಂಪ‍ನಿ ಮೈಂಡ್‌ಟ್ರೀ ನಿವ್ವಳ ಲಾಭ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 88ರಷ್ಟು ಹೆಚ್ಚಾಗಿದ್ದು, ₹ 254 ಕೋಟಿಗಳಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 135 ಕೋಟಿ ಇತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಬೆಂಗಳೂರಿನ ಐ.ಟಿ. ಕಂಪನಿಯ ವರಮಾನ ₹ 1,914.3 ಕೋಟಿಗಳಿಂದ ₹ 1,926 ಕೋಟಿಗೆ ಏರಿಕೆ ಕಂಡಿದೆ.

ADVERTISEMENT

ಮಧ್ಯಂತರ ಲಾಭಾಂಶ: ಕಂಪನಿಯ ನಿರ್ದೇಶಕರ ಮಂಡಳಿಯು ಪ್ರತಿ ಷೇರಿಗೆ ₹ 7.5 ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.