ADVERTISEMENT

ಕಚ್ಚಾ ತೈಲ ಬೆಲೆ ಇಳಿಕೆ: ಹರ್ದೀಪ್‌ ಸಿಂಗ್‌ ಪುರಿ ವಿಶ್ವಾಸ

ಪಿಟಿಐ
Published 22 ಅಕ್ಟೋಬರ್ 2024, 14:02 IST
Last Updated 22 ಅಕ್ಟೋಬರ್ 2024, 14:02 IST
<div class="paragraphs"><p>ಹರ್ದೀಪ್‌ ಸಿಂಗ್‌ ಪುರಿ –ಪಿಟಿಐ ಚಿತ್ರ</p></div>

ಹರ್ದೀಪ್‌ ಸಿಂಗ್‌ ಪುರಿ –ಪಿಟಿಐ ಚಿತ್ರ

   

ನವದೆಹಲಿ : ‘ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಸಂಗ್ರಹ ಸಾಕಷ್ಟಿದೆ.  ಬ್ರೆಜಿಲ್‌ ಮತ್ತು ಗಯಾನಾ ಕೂಡ ತೈಲ ಪೂರೈಕೆಯ ಮಾರುಕಟ್ಟೆ ಪ್ರವೇಶಿಸಿವೆ. ಹಾಗಾಗಿ, ಬೆಲೆ ಇಳಿಕೆಯಾಗಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್‌ ಪುರಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲದ ಪೂರೈಕೆಯಲ್ಲಿ ಕೊರತೆಯಾಗಿಲ್ಲ. ಆದರೆ, ಹಡಗಿನ ಮೂಲಕ ಸಾಗಣೆ ಮತ್ತು ವಿಮಾ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ತೈಲ ಬೆಲೆಯು ಹೆಚ್ಚಳವಾಗಿದೆ’ ಎಂದು ತಿಳಿಸಿದರು.

ADVERTISEMENT

ಭಾರತವು ದೇಶೀಯ ಬೇಡಿಕೆ ಪೈಕಿ ಶೇ 80ರಷ್ಟು ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ, ಜಾಗತಿಕ ಮಟ್ಟದಲ್ಲಿನ ಬೆಲೆ ಏರಿಕೆಯು ಆಮದಿನ ದರದ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಇಂಧನ ಹಣದುಬ್ಬರದ ಏರಿಕೆಗೂ ಕಾರಣವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.