ADVERTISEMENT

ಮಿರ್‌ ಗ್ರೂಪ್‌: ₹1,500 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 20:23 IST
Last Updated 22 ನವೆಂಬರ್ 2024, 20:23 IST
<div class="paragraphs"><p>ಘಟಕ ಸ್ಥಾಪನೆಗೆ ಸಂಬಂಧಿಸಿದ ದಾಖಲೆಗಳನ್ನು ಇಟಲಿಯ ಮಿರ್ ಗ್ರೂಪ್ ಸಿಇಒ ರಫಾಲೆ ಮೊರಾಝೊ ಮತ್ತು ಎಸ್ಇಝಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ವಿನಿಮಯ ಮಾಡಿಕೊಂಡರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಿರ್ ಗ್ರೂಪ್‌ ಕಾರ್ಯನಿರ್ವಾಹಕ ನಿರ್ದೇಶಕ ನಿತಿಕ್ ರತ್ನಾಕರ್, ರತನ್ ಹಾಗೂ ಮಿರ್ ಗ್ರೂಪ್ ಕಾನೂನು ವಿಭಾಗದ ಮುಖ್ಯಸ್ಥ ಕ್ಲಾಡಿಯೊ ಪಾಲ್ಗೊಂಡಿದ್ದರು</p></div>

ಘಟಕ ಸ್ಥಾಪನೆಗೆ ಸಂಬಂಧಿಸಿದ ದಾಖಲೆಗಳನ್ನು ಇಟಲಿಯ ಮಿರ್ ಗ್ರೂಪ್ ಸಿಇಒ ರಫಾಲೆ ಮೊರಾಝೊ ಮತ್ತು ಎಸ್ಇಝಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ವಿನಿಮಯ ಮಾಡಿಕೊಂಡರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಿರ್ ಗ್ರೂಪ್‌ ಕಾರ್ಯನಿರ್ವಾಹಕ ನಿರ್ದೇಶಕ ನಿತಿಕ್ ರತ್ನಾಕರ್, ರತನ್ ಹಾಗೂ ಮಿರ್ ಗ್ರೂಪ್ ಕಾನೂನು ವಿಭಾಗದ ಮುಖ್ಯಸ್ಥ ಕ್ಲಾಡಿಯೊ ಪಾಲ್ಗೊಂಡಿದ್ದರು

   

ಮಂಗಳೂರು: ಇಟಲಿಯ ಮಿರ್ ಗ್ರೂಪ್‌ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ (ಎಂಎಸ್‌ಇಝಡ್‌) ಘಟಕ ತೆರೆಯಲು ಮುಂದಾಗಿದೆ.

ಶುಕ್ರವಾರ ನಡೆದ ಸಮಾರಂಭದಲ್ಲಿ ಈ ಕುರಿತ ಒಪ್ಪಂದ ಪತ್ರಗಳನ್ನು ಎಂಎಸ್‌ಇಝಡ್‌ ಲಿಮಿಟೆಡ್ ಸಿಇಒ ಸೂರ್ಯನಾರಾಯಣ ವಿ. ಮತ್ತು ಮಿರ್ ಗ್ರೂಪ್ ಸಿಇಒ ರಫಾಲೆ ಮೊರಾಝೊ ವಿನಿಮಯ ಮಾಡಿಕೊಂಡರು.

ADVERTISEMENT

ಸಭೆಯ ನಂತರ ಪತ್ರಕರ್ತರ ಜೊತೆಗೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ₹1,500 ಕೋಟಿ ಮೊತ್ತದ ಹೂಡಿಕೆಗೆ ಮಿರ್ ಗ್ರೂಪ್ ಮುಂದಾಗಿದೆ. ನೇರವಾಗಿ 500 ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ ‘ಬ್ಯಾಕ್ ಟು ಊರು’ ಚಿಂತನೆಯ ಮೊದಲ ಯೋಜನೆ ಇದಾಗಿದೆ. ತಾವು ಮತ್ತು ಮಿರ್ ಗ್ರೂಪ್ ಪ್ರತಿನಿಧಿಗಳು ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. 

ಸೂರ್ಯನಾರಾಯಣ ಮಾತನಾಡಿ, ಕಟ್ಟಡ ನಿರ್ಮಾಣ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದ ಸಾಮಗ್ರಿಗಳ ಉತ್ಪಾದನೆಗೆ ಮಿರ್ ಗ್ರೂಪ್‌ ಮುಂದಾಗಿದೆ ಎಂದರು.

ಇಲ್ಲಿಯವರೆಗೆ ಮಂಗಳೂರು ವಿಶೇಷ ಆರ್ಥಿಕ ವಲಯದಿಂದ (ಎಂಎಸ್‌ಇಝಡ್‌) ₹50 ಸಾವಿರ ಕೋಟಿ ಮೊತ್ತದ ಉತ್ಪನ್ನಗಳು ರಫ್ತು ಆಗಿವೆ. ಎಂಎಸ್‌ಇಝಡ್‌ನಲ್ಲಿ
ಸದ್ಯ 900 ಎಕರೆ ಪ್ರದೇಶದಲ್ಲಿ 10 ಕಂಪನಿಗಳು ಇದ್ದು ಇನ್ನೂ 160 ಎಕರೆ ಜಾಗ ಉಳಿದಿದೆ. ಅದರಲ್ಲಿ 60 ಎಕರೆ ಜಾಗವನ್ನು ಗ್ರೀನ್ ಹೈಡ್ರೋಜನ್ ಉತ್ಪಾದಿಸುವ ಕಂಪನಿಗಳಿಗೆ
ಮೀಸಲಿಡಲಾಗುವುದು ಎಂದರು.

‘70 ಎಕರೆ ಪ್ರದೇಶದಲ್ಲಿ ಒಎನ್‌ಜಿಸಿ ಘಟಕ ತೆರೆಯಲಿದ್ದು ಗೇಲ್‌ನ ಮಂಗಳೂರು ಪೆಟ್ರೊಕೆಮಿಕಲ್ಸ್
ಲಿಮಿಟೆಡ್ (ಜಿಎಂಪಿಎಲ್‌) ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ
ಕಾರ್ಯಾರಂಭ ಮಾಡಲಿದೆ’ ಎಂದು ವಿವರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.