ADVERTISEMENT

ಕೋಲಾರದಲ್ಲಿ ಸಿಸಿಟಿ ಕಂಪನಿಯಿಂದ ₹400 ಕೋಟಿ ಹೂಡಿಕೆ

ಪಿಟಿಐ
Published 7 ನವೆಂಬರ್ 2024, 14:06 IST
Last Updated 7 ನವೆಂಬರ್ 2024, 14:06 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ಜಪಾನ್‌ನ ಬಹುರಾಷ್ಟ್ರೀಯ ಕಂಪನಿಯಾದ ಮಿತ್ಸುಬಿಷಿ ಎಲೆಕ್ಟ್ರಿಕ್ ಗ್ರೂಪ್‌ನ ಒಡೆತನಕ್ಕೆ ಸೇರಿದ ಕ್ಲೈಮಾವೆನೆಟಾ ಕ್ಲೈಮೇಟ್ ಟೆಕ್ನಾಲಜೀಸ್‌ (ಸಿಸಿಟಿ), ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹400 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ.

ನರಸಾಪುರದಲ್ಲಿ ಕಂಪನಿಯು ಘಟಕ ಸ್ಥಾಪಿಸಿದ್ದು, ಶುಕ್ರವಾರ ಉದ್ಘಾಟನೆಯಾಗಲಿದೆ. ಇದರಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಹೊಸದಾಗಿ ₹500 ಕೋಟಿ ಮೌಲ್ಯದ ಆರ್ಡರ್‌ ಪಡೆಯಲಾಗಿದೆ. ಮುಂದಿನ ಐದು ವರ್ಷದಲ್ಲಿ ಆರ್ಡರ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ಸಿಇಒ ಅನಿಲ್‌ ದೇವ್‌ ಗುರುವಾರ ತಿಳಿಸಿದ್ದಾರೆ.

ADVERTISEMENT

ಈ ಘಟಕದಲ್ಲಿ ಹವಾನಿಯಂತ್ರಿತ ವ್ಯವಸ್ಥೆಗೆ ಅಗತ್ಯವಿರುವ ಉಪಕರಣಗಳನ್ನು ತಯಾರಿಸಲಾಗುತ್ತದೆ. ಪತಿಷ್ಠಿತ ಹೋಟೆಲ್‌ಗಳು, ಆರೋಗ್ಯ ಸಂಸ್ಥೆಗಳು, ಮಾಲ್‌ಗಳು, ಮಲ್ಟಿಫ್ಲೆಕ್ಸ್‌ ಸೇರಿ ಡೆವಲಪರ್‌ಗಳು ಮತ್ತು ಕಾರ್ಪೊರೇಟ್‌ ಕಂಪನಿಗಳಿಗೆ ಇವುಗಳನ್ನು ಪೂರೈಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಕಂಪನಿಯಲ್ಲಿ 300 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಐದು ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.