ಮುಂಬೈ (ಪಿಟಿಐ): ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹3,683 ಕೋಟಿಯಷ್ಟು ತೆರಿಗೆ ನಂತರದ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಗಳಿಸಿದ್ದ ಲಾಭಕ್ಕೆ ಹೋಲಿಸಿದರೆ (₹2,360 ಕೋಟಿ) ಈ ಬಾರಿ ಲಾಭವು ಶೇ 56ರಷ್ಟು ಹೆಚ್ಚಾಗಿದೆ.
ಕಾರ್ಯಾಚರಣಾ ವರಮಾನ ಶೇ 17.57ರಷ್ಟು ಏರಿಕೆ ಕಂಡು ₹33,406 ಕೋಟಿಗೆ ತಲುಪಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಒಟ್ಟು ವೆಚ್ಚವು ₹26,195 ಕೋಟಿಯಿಂದ ₹30,492 ಕೋಟಿಗೆ ಏರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.