ನವದೆಹಲಿ: ಡಿಸೆಂಬರ್‌ನಿಂದ ಮೊಬೈಲ್ ಸೇವಾ ದರಗಳನ್ನು ಹೆಚ್ಚಿಸಲು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಿರ್ಧರಿಸಿವೆ.
ತೀವ್ರ ಸ್ವರೂಪದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಸೇವಾ ದರಗಳನ್ನು ಡಿಸೆಂಬರ್ 1ರಿಂದ ಸೂಕ್ತ ರೀತಿಯಲ್ಲಿ ಹೆಚ್ಚಿಸಲಾಗುವುದು ಎಂದು ವೊಡಾಫೋನ್ ಐಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಉದ್ದೇಶಿತ ದರ ಹೆಚ್ಚಳದ ಬಗ್ಗೆ ವಿವರಗಳನ್ನು ಒದಗಿಸಿಲ್ಲ.
ಮೊಬೈಲ್ ಸೇವಾ ವಹಿವಾಟು ಲಾಭದಾಯಕವಾಗಿರಲು ದರಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಏರ್‌ಟೆಲ್ ತಿಳಿಸಿದೆ. ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಇವೆರಡೂ ಸಂಸ್ಥೆಗಳ ಒಟ್ಟಾರೆ ನಷ್ಟ ₹ 74 ಸಾವಿರ ಕೋಟಿಗಳಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.