ADVERTISEMENT

ಭಾರತದ ಜಿಡಿಪಿ ಶೇ 6.8ರಷ್ಟು ಪ್ರಗತಿ: ಮೂಡಿಸ್‌

ಪಿಟಿಐ
Published 4 ಮಾರ್ಚ್ 2024, 15:00 IST
Last Updated 4 ಮಾರ್ಚ್ 2024, 15:00 IST
<div class="paragraphs"><p>ಜಿಡಿಪಿ</p></div>

ಜಿಡಿಪಿ

   

ನವದೆಹಲಿ: ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಸಂಸ್ಥೆಯು ಭಾರತದ ಜಿಡಿಪಿ ಮುನ್ನೋಟವನ್ನು ಪರಿಷ್ಕರಿಸಿದ್ದು, 2024ರಲ್ಲಿ ಶೇ 6.8ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ. 

2025ರಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 6.4 ಆಗಲಿದೆ. ಜಿ–20 ರಾಷ್ಟ್ರಗಳ ಪೈಕಿ ಭಾರತದ ಆರ್ಥಿಕತೆಯು ಅತಿವೇಗವಾಗಿ ಬೆಳವಣಿಗೆ ಕಾಣುತ್ತಿದೆ ಎಂದು ತಿಳಿಸಿದೆ.

ADVERTISEMENT

2024ರಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ 6.1ರಷ್ಟು ಪ್ರಗತಿ ಕಾಣಲಿದೆ ಎಂದು ಈ ಮೊದಲು ಅಂದಾಜಿಸಿತ್ತು. ಆದರೆ, 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 8.4ರಷ್ಟು ದಾಖಲಾಗಿದೆ. ಹಾಗಾಗಿ, ಮೂಡಿಸ್‌ ಸಂಸ್ಥೆಯು ಅಂದಾಜನ್ನು ಪರಿಷ್ಕರಿಸಿದೆ.

ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿದೆ. ಆದರೆ, 2023ರಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ದೃಢವಾಗಿದೆ. ಸರ್ಕಾರದ ಬಂಡವಾಳ ವೆಚ್ಚ ಮತ್ತು  ತಯಾರಿಕಾ ಚಟುವಟಿಕೆಗಳು ಸದೃಢವಾಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.