ನವದೆಹಲಿ: ಮೂಡಿಸ್ ಇನ್‌ವೆಸ್ಟರ್ಸ್ ಸರ್ವಿಸಸ್, ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಬದಲಿಸಿಲ್ಲ. 2023ರಲ್ಲಿ ಜಿಡಿಪಿಯು ಈ ಹಿಂದೆ ಅಂದಾಜು ಮಾಡಿರುವಂತೆಯೇ ಶೇ 6.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಗುರುವಾರ ಹೇಳಿದೆ.
ದೇಶಿ ಬೇಡಿಕೆ ಉತ್ತಮವಾಗಿ ಇರುವುದರಿಂದ ಅಲ್ಪಾವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಸ್ಥಿರವಾಗಿ ಇರಲಿದೆ ಎಂದು ಅದು ಹೇಳಿದೆ.
ಜಾಗತಿಕ ಆರ್ಥಿಕತೆಯು ಅನುಕೂಲಕರವಾಗಿ ಇಲ್ಲದೇ ಇರುವುದರಿಂದ ದೇಶದ ರಫ್ತು ವಹಿವಾಟು ದುರ್ಬಲ ಆಗಿದೆ. ಹೀಗಿದ್ದರೂ ದೇಶಿ ಬೇಡಿಕೆಯು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ ಎಂದು 2024–25ರ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಸಂಸ್ಥೆಯು ತಿಳಿಸಿದೆ.
2024ರಲ್ಲಿ ಜಿಡಿಪಿ ಶೇ 61. ಮತ್ತು 2025ರಲ್ಲಿ ಶೇ 6.3ರಷ್ಟು ಬೆಳವಣಿಗೆ ಕಾಣುವ ಅಂದಾಜು ಮಾಡಿರುವುದಾಗಿಯೂ ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.