ADVERTISEMENT

ಸಿಎನ್‌ಜಿ ಸಗಟುದಾರರಿಗೆ ನೈಸರ್ಗಿಕ ಅನಿಲ ಪೂರೈಕೆ ಕಡಿತ

ಪಿಟಿಐ
Published 15 ನವೆಂಬರ್ 2024, 13:46 IST
Last Updated 15 ನವೆಂಬರ್ 2024, 13:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸಿಎನ್‌ಜಿ ಸಗಟುದಾರರಿಗೆ ಕೇಂದ್ರ ಸರ್ಕಾರವು ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯನ್ನು ಕಡಿತಗೊಳಿಸಿದೆ. ಇದು ಕಂಪನಿಗಳ ಲಾಭ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ತಿಳಿಸಿದೆ. 

ಈ ಕಂಪನಿಯು ಸಿಎನ್‌ಜಿ ಆಗಿ ಪರಿವರ್ತಿಸಿ ವಾಹನಗಳು ಮತ್ತು ಕೊಳವೆ ಮೂಲಕ ಅಡುಗೆ ಮನೆಗಳಿಗೆ ಅನಿಲ (ಪಿಎನ್‌ಜಿ) ಪೂರೈಸುತ್ತದೆ.

ದೇಶದಲ್ಲಿ ವಾರ್ಷಿಕವಾಗಿ ಅನಿಲದ ಉತ್ಪಾದನೆಯು ಕಡಿಮೆಯಾಗುತ್ತಿದೆ. ಹಾಗಾಗಿ, ಸರ್ಕಾರವು ನವೆಂಬರ್‌ 16ರಂದು ದೇಶೀಯವಾಗಿ ಉತ್ಪಾದಿಸುವ ಸಾಂದ್ರಿಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆಯನ್ನು ಶೇ 20ರಷ್ಟು ಕಡಿತಗೊಳಿಸಿದೆ. ಇದರಿಂದ ನಗರ ಪ್ರದೇಶದ ವ್ಯಾಪ್ತಿಯ ಸಿಎನ್‌ಜಿ ಸಗಟುದಾರರು ತೊಂದರೆಗೆ ಸಿಲುಕಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿ ಎದುರಾಗಿರುವ ಕೊರತೆ ನೀಗಿಸಲು ಸಿಎನ್‌ಜಿ ಅನ್ನು ಆಮದು ಮಾಡಿಕೊಳ್ಳಬಹುದು. ಅಲ್ಲದೆ, ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ಖರೀದಿಬಹುದಾಗಿದೆ. ಇದರಿಂದ ಸಿಎನ್‌ಜಿ ದರವು ಪ್ರತಿ ಕೆ.ಜಿಗೆ ₹4ರಿಂದ ₹6 ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.