ADVERTISEMENT

ರಾಜ್ಯದಲ್ಲಿ ಎಂಟು ತಿಂಗಳಲ್ಲೇ 1 ಲಕ್ಷ ಇವಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ವಿದ್ಯುತ್ ಚಾಲಿತ ವಾಹನಗಳ (ಸಾಂದರ್ಭಿಕ ಚಿತ್ರ)
ವಿದ್ಯುತ್ ಚಾಲಿತ ವಾಹನಗಳ (ಸಾಂದರ್ಭಿಕ ಚಿತ್ರ)   

ರಾಜ್ಯದಲ್ಲಿ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು (ಇವಿ) ನೋಂದಣಿಯಾಗಿವೆ. 2022ರ ಇಡೀ ವರ್ಷದಲ್ಲಿ ರಾಜ್ಯದಾದ್ಯಂತ ನೋಂದಣಿಯಾಗಿದ್ದ ಇವಿಗಳ ಸಂಖ್ಯೆ 95 ಸಾವಿರದಷ್ಟಿತ್ತು. ಈ ವರ್ಷ ಎಂಟು ತಿಂಗಳಲ್ಲೇ 1 ಲಕ್ಷಕ್ಕಿಂತ ಹೆಚ್ಚು ಇವಿಗಳ ನೋಂದಣಿಯಾಗಿದೆ. ಆದರೆ, ಇವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಪ್ರಮಾಣದಲ್ಲೇ ರಾಜ್ಯದಲ್ಲಿ ಸಾರ್ವಜನಿಕ ಚಾರ್ಜಿಂಗ್‌ ಘಟಕಗಳು ಸ್ಥಾಪನೆಯಾಗುತ್ತಿಲ್ಲ

ಸಾರ್ವಜನಿಕ ಚಾರ್ಜಿಂಗ್‌ ಘಟಕಗಳು

ರಾಜ್ಯದಲ್ಲಿ ಇವಿ ಸಾರ್ವಜನಿಕ ಚಾರ್ಜಿಂಜ್‌ ಘಟಕಗಳನ್ನು ಸ್ಥಾಪಿಸಲು 2018ರಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. 2023ರ ಸೆಪ್ಟೆಂಬರ್‌ವರೆಗೆ ರಾಜ್ಯದ ವಿವಿಧೆಡೆ ಸ್ಥಾಪಿಸಲಾದ ಚಾರ್ಜಿಂಗ್‌ ಘಟಕಗಳ ಸಂಖ್ಯೆ 584 ಮಾತ್ರ. 2023ರಲ್ಲಿ ಹೊಸದಾಗಿ 1,270 ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇವಿಗಳ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಅವುಗಳ ಬಗೆಗೆ ಜನರ ವಿಶ್ವಾಸ ಹೆಚ್ಚಾಗಿದೆ. ಇವಿಗಳಿಂದಾಗುವ ಉಳಿತಾಯವೂ, ಅವುಗಳ ಖರೀದಿಯಲ್ಲಿ ಆಗಿರುವ ಏರಿಕೆಗೆ ಪ್ರಮುಖ ಕಾರಣ. ಆದರೆ, ಅದೇ ಮಟ್ಟದಲ್ಲಿ ಚಾರ್ಜಿಂಗ್‌ ಘಟಕಗಳು ಸ್ಥಾಪನೆಯಾಗುತ್ತಿಲ್ಲ. ಬಸ್ಸು, ಲಾರಿ ಮತ್ತು ಕಾರುಗಳಿಗೆ ಸಾರ್ವಜನಿಕ ಚಾರ್ಜಿಂಗ್‌ ಘಟಕಗಳ ಅವಶ್ಯಕತೆ ಇದೆ. ಜತೆಗೆ ದ್ವಿಚಕ್ರ ವಾಹನಗಳಿಗಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್‌ ಘಟಕ ಆರಂಭಿಸುವುದನ್ನು ಉತ್ತೇಜಿಸಬೇಕು.
–ಪವನ್‌ ಮುಳುಕುಟ್ಲ, ವರ್ಲ್ಡ್‌ ರಿಸೋರ್ಸ್‌ ಇನ್‌ಸ್ಟಿಟ್ಯೂಟ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT