ನವದೆಹಲಿ: ‘ಧಾರಾ’ ಹೆಸರಿನಲ್ಲಿ ಅಡುಗೆ ಎಣ್ಣೆಗಳನ್ನು ಮಾರಾಟ ಮಾಡುವ ಮದರ್ ಡೈರಿ, ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಪ್ರತಿ ಲೀಟರ್‌ಗೆ ₹10ರವರೆಗೆ ಕಡಿಮೆ ಮಾಡಿದೆ. ಹೊಸ ದರವನ್ನು ಹೊಂದಿರುವ ಅಡುಗೆ ಎಣ್ಣೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
ಅಡುಗೆ ಎಣ್ಣೆಗಳ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಆಗುತ್ತಿದ್ದು, ಅದಕ್ಕೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿನ ಎಂಆರ್‌ಪಿಯನ್ನು ಕೂಡ ಕಡಿಮೆ ಮಾಡಲಾಗಿದೆ ಎಂದು ಮದರ್ ಡೈರಿ ಕಂಪನಿ ಹೇಳಿದೆ.
ಹೊಸ ದರದ ಪ್ರಕಾರ ಧಾರಾ ಬ್ರ್ಯಾಂಡ್‌ನ ರಿಫೈನ್ಡ್ ಸೋಯಾ ಎಣ್ಣೆಯ ಬೆಲೆ ಲೀಟರ್‌ಗೆ ₹140, ರಿಫೈನ್ಡ್ ರೈಸ್‌ಬ್ರಾನ್ ಎಣ್ಣೆಯ ಬೆಲೆ ₹160 ಆಗಲಿದೆ. ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಬೆಲೆ ₹150 ಹಾಗೂ ಶೇಂಗಾ ಎಣ್ಣೆ ಬೆಲೆ ₹230 ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.