ADVERTISEMENT

ಎಂಟಿಎನ್‌ಎಲ್‌ ಆಸ್ತಿ ಮಾರಾಟಕ್ಕೆಷೇರುದಾರರ ಒಪ್ಪಿಗೆ

ಪಿಟಿಐ
Published 9 ಜನವರಿ 2020, 17:06 IST
Last Updated 9 ಜನವರಿ 2020, 17:06 IST

ನವದೆಹಲಿ: ಆರ್ಥಿಕವಾಗಿ ನಷ್ಟದಲ್ಲಿರುವ ಎಂಟಿಎನ್‌ಎಲ್‌ನ ಆಸ್ತಿಗಳ ಮಾರಾಟ ಮತ್ತು ಬಂಡವಾಳ ಸಂಗ್ರಹಿಸುವ ಉದ್ದೇಶಕ್ಕೆ ಷೇರುದಾರರು ಒಪ್ಪಿಗೆ ನೀಡಿದ್ದಾರೆ.

ಬುಧವಾರ ನಡೆದ ವಿಶೇಷ ಸಭೆಯಲ್ಲಿ ಪರಿವರ್ತಿಸಲಾಗದ ಸಾಲಪತ್ರಗಳ ವಿತರಣೆ ಮೂಲಕ ₹ 6,500 ಕೋಟಿ ಬಂಡವಾಳ ಸಂಗ್ರಹಿಸುವ ಪರವಾಗಿ 99.89ರಷ್ಟು ಮತಗಳು ಬಂದಿವೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಗೆ ಸೇರಿರುವ ಕಟ್ಟಡ ಮತ್ತು ಭೂಮಿಯನ್ನು ನಗದೀಕರಿಸಲು ಸಹ ಷೇರುದಾರರು ಒಪ್ಪಿಗೆ ನೀಡಿದ್ದಾರೆ.

ADVERTISEMENT

ಕೇಂದ್ರ ಸಚಿವ ಸಂಪುಟದ ಪುನಶ್ಚೇತನ ಯೋಜನೆಯ ಭಾಗವಾಗಿ ಈ ಕ್ರಮಕ್ಕೆ ಮುಂದ್ದಾಗಿದ್ದು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆಯ ಇಲಾಖೆಯ ಸಹಯೋಗದೊಂದಿಗೆ ನಗದೀಕರಿಸುವ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.