ಬೆಂಗಳೂರು: ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಯಲ್ಲಿ ಐಡಿ, ರಿಷ್ತಾ, ಅಸಲ್‌ನಂತಹ ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ಎಂಟಿಆರ್ ಫುಡ್ಸ್ ಮುಂದಾಗಿದೆ. ಆರಂಭಿಕ ಹಂತದಲ್ಲಿ ಇಡ್ಲಿ ಮತ್ತು ದೋಸೆಗೆ ಪ್ರತ್ಯೇಕವಾದ ಹಿಟ್ಟುಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕೆಲವು ಬ್ರ್ಯಾಂಡ್‌ಗಳು ಇಡ್ಲಿ ಹಾಗೂ ದೋಸೆಗೆ ಪ್ರತ್ಯೇಕ ಹಿಟ್ಟು ಮಾರಾಟ ಮಾಡುವುದಿಲ್ಲ. ಒಂದೇ ಹಿಟ್ಟನ್ನು ಇಡ್ಲಿಗೂ ದೋಸೆಗೂ ಬಳಸಬಹುದು ಎಂದು ಹೇಳುತ್ತವೆ. ಎಂಟಿಆರ್ ಫುಡ್ಸ್, ಇಡ್ಲಿ ಮತ್ತು ದೋಸೆ ಹಿಟ್ಟಿನ ಪ್ರತಿ ಪ್ಯಾಕ್‌ಗೆ ₹ 75 ಬೆಲೆ ನಿಗದಿ ಮಾಡಿದೆ. ಒಂದು ಪ್ಯಾಕ್ ಇಡ್ಲಿ ಹಿಟ್ಟು ಬಳಸಿ 16 ಇಡ್ಲಿಗಳನ್ನು, ಒಂದು ಪ್ಯಾಕ್ ದೋಸೆ ಹಿಟ್ಟು ಬಳಸಿ 12 ದೋಸೆಗಳನ್ನು ಮಾಡಬಹುದು ಎಂದು ಕಂಪನಿ ಹೇಳಿದೆ.
ಈ ಉತ್ಪನ್ನಗಳಿಗಾಗಿ ಕಂಪನಿಯು ₹ 25 ಕೋಟಿಯನ್ನು ಬಂಡವಾಳ ವೆಚ್ಚವಾಗಿ ತೊಡಗಿಸಿದೆ. ಉತ್ಪನ್ನಗಳ ಪ್ರಚಾರಕ್ಕೆ ಪ್ರತ್ಯೇಕವಾಗಿ ಹಣ ಹೂಡಿಕೆ ಮಾಡಲಾಗುತ್ತದೆ ಎಂದು ಎಂಟಿಆರ್ ಫುಡ್ಸ್‍ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂಜಯ್ ಶರ್ಮ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.