ಬೆಂಗಳೂರು: ಎಂಟಿಆರ್, ಈಸ್ಟರ್ನ್ ಕಾಂಡಿಮೆಂಟ್ಸ್ ಮತ್ತು ಅಂತರರಾಷ್ಟ್ರೀಯ ವಹಿವಾಟುಗಳನ್ನು ಓರ್ಕ್ಲಾ ಇಂಡಿಯಾದ ಅಡಿಯಲ್ಲಿ ತರುವ ಮೂಲಕ ಭಾರತದಲ್ಲಿ ತನ್ನ ವಹಿವಾಟನ್ನು ಪುನರ್‌ರಚನೆ ಮಾಡಿರುವುದಾಗಿ ನಾರ್ವೆಯ ಓರ್ಕ್ಲಾ ಎಎಸ್‌ಎ ಕಂಪನಿಯು ಬುಧವಾರ ಹೇಳಿದೆ.
ಎಂಟಿಆರ್‌ನಲ್ಲಿ ಸಿಇಒ ಆಗಿದ್ದ ಸಂಜಯ್ ಶರ್ಮ ಅವರು ಇನ್ನುಮುಂದೆ ಓರ್ಕ್ಲಾ ಇಂಡಿಯಾದ ಸಿಇಒ ಆಗಿ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಎಂಟಿಆರ್, ಈಸ್ಟರ್ನ್ ಮತ್ತು ಅಂತರರಾಷ್ಟ್ರೀಯ ವಹಿವಾಟಿಗೆ ತಲಾ ಒಬ್ಬರು ಸಿಇಒ ಇರಲಿದ್ದಾರೆ. ಮೂರು ಬ್ರ್ಯಾಂಡ್‌ಗಳು ಸ್ವತಂತ್ರವಾಗಿಯೇ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
2007ರಲ್ಲಿ ಎಂಟಿಆರ್ ಫುಡ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಓರ್ಕ್ಲಾ ಕಂಪನಿಯು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತು. 2020ರಲ್ಲಿ ಕೇರಳ ಮೂಲದ ಈಸ್ಟರ್ನ್ ಕಾಂಡಿಮೆಂಟ್ಸ್ ಕಂಪನಿಯಲ್ಲಿ ಶೇ 67.8ರಷ್ಟು ಷೇರು ಖರೀದಿಸುವ ಮೂಲಕ ವಹಿವಾಟನ್ನು ಮತ್ತಷ್ಟು ವಿಸ್ತರಣೆ ಮಾಡಿತು. ಸದ್ಯ ಓರ್ಕಾ ₹2,200 ಕೋಟಿ ಮೌಲ್ಯದ ವಹಿವಾಟು ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.