ADVERTISEMENT

ಎಂಟಿಆರ್‌: ಗೊಜ್ಜು ಮ್ಯಾಜಿಕ್‌ ಮಸಾಲಾ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 17:53 IST
Last Updated 2 ಫೆಬ್ರುವರಿ 2020, 17:53 IST
ಕಂಪನಿಯ ಜನರಲ್‌ ಬಿಸಿನೆಸ್‌ ಮ್ಯಾನೇಜರ್‌ ಮೂರ್ತಿ ಆರ್‌ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಸುನಯ್‌ ಭಾಸಿನ್‌ ಅವರು ಗೊಜ್ಜು ಮ್ಯಾಜಿಕ್‌ ಮಸಾಲಾ ಪರಿಚಯಿಸಿದರು
ಕಂಪನಿಯ ಜನರಲ್‌ ಬಿಸಿನೆಸ್‌ ಮ್ಯಾನೇಜರ್‌ ಮೂರ್ತಿ ಆರ್‌ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಸುನಯ್‌ ಭಾಸಿನ್‌ ಅವರು ಗೊಜ್ಜು ಮ್ಯಾಜಿಕ್‌ ಮಸಾಲಾ ಪರಿಚಯಿಸಿದರು   

ಬೆಂಗಳೂರು: ಪ್ಯಾಕೇಜ್ಡ್‌ ಆಹಾರ ಮತ್ತು ತಿನಿಸುಗಳನ್ನು ತಯಾರಿಸುವ ಎಂಟಿಆರ್‌ ಫುಡ್ಸ್‌, ಈಗ ಗೊಜ್ಜು ಮ್ಯಾಜಿಕ್‌ ಮಸಾಲಾ ಉತ್ಪನ್ನವನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

‘ಒಂದು ಮಸಾಲೆ, ಹಲವು ಗೊಜ್ಜು’ ತತ್ವದಡಿ ವೈವಿಧ್ಯಮಯ ಗೊಜ್ಜು ತಯಾರಿಸಲು ಈ ಮಸಾಲೆ ಬಳಸಬಹುದು.

‘ಗುಣಮಟ್ಟ ಮತ್ತು ರುಚಿಕರ ಪ್ಯಾಕೇಜ್ಡ್‌ ಆಹಾರ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಎಂಟಿಆರ್‌, ಈಗ ಗ್ರಾಹಕರ ಬಹುದಿನಗಳ ಬೇಡಿಕೆಯನ್ನು ‘ಗೊಜ್ಜು ಮ್ಯಾಜಿಕ್‌ ಮಸಾಲಾ’ ಮೂಲಕ ಈಡೇರಿಸಿದೆ. ಟೊಮೆಟೊ, ಹಾಗಲಕಾಯಿ, ಪೈನಾಪಲ್‌ ಮತ್ತು ಬೆಂಡೆಕಾಯಿ – ಹೀಗೆ ನಾಲ್ಕು ಬಗೆಯ ಗೊಜ್ಜು ಪರಿಚಯಿಸಲಾಗಿದೆ ಎಂದು ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಸುನಯ್‌ ಭಾಸಿನ್‌ ಅವರು ತಿಳಿಸಿದ್ದಾರೆ.

ADVERTISEMENT

20 ಮತ್ತು 60 ಗ್ರಾಂಗಳಲ್ಲಿ ಕ್ರಮವಾಗಿ ₹ 10 ಮತ್ತು ₹ 30ರ ದರದಲ್ಲಿ ಈ ಗೊಜ್ಜು ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.