ADVERTISEMENT

4ನೇ ವರ್ಷವೂ ಸಂಬಳ ತ್ಯಜಿಸಿದ ಮುಕೇಶ್‌ ಅಂಬಾನಿ

ಪಿಟಿಐ
Published 7 ಆಗಸ್ಟ್ 2024, 16:21 IST
Last Updated 7 ಆಗಸ್ಟ್ 2024, 16:21 IST
ಮುಕೇಶ್‌ ಅಂಬಾನಿ –ಪಿಟಿಐ ಚಿತ್ರ
ಮುಕೇಶ್‌ ಅಂಬಾನಿ –ಪಿಟಿಐ ಚಿತ್ರ   

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು, ಸತತ ನಾಲ್ಕನೇ ವರ್ಷವೂ ಸಂಬಳ ಪಡೆದಿಲ್ಲ ಎಂದು ಕಂಪನಿ ತಿಳಿಸಿದೆ. 

ಮುಕೇಶ್‌ ಅವರಿಗೆ ವಾರ್ಷಿಕ ₹15 ಕೋಟಿ ಸಂಬಳ ನಿಗದಿಪಡಿಸಲಾಗಿದೆ. 2008–09ರಿಂದ 2019–20ರ ವರೆಗೆ ಅವರು ಈ ಸಂಬಳ ಪಡೆದಿದ್ದಾರೆ.

ಆದರೆ, ಕೋವಿಡ್‌ ಸಾಂಕ್ರಾಮಿಕದ ವೇಳೆ (2020–21ರಲ್ಲಿ) ಸ್ವಯಂಪ್ರೇರಣೆಯಿಂದ ಕಂಪನಿಗೆ ಸಂಬಳ ಬಿಟ್ಟು ಕೊಟ್ಟಿದ್ದರು. 2023–24ರಲ್ಲಿ ಅವರು ಸಂಬಳ ಸೇರಿ ಯಾವುದೇ ಭತ್ಯೆ ಪಡೆದಿಲ್ಲ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ. 

ADVERTISEMENT

1977ರಿಂದಲೂ ಮುಕೇಶ್‌ ಅವರು ರಿಲಯನ್ಸ್ ಸಮೂಹದ ಆಡಳಿತ ಮಂಡಳಿಯಲ್ಲಿದ್ದಾರೆ. 2002ರಲ್ಲಿ ಅವರ ತಂದೆ ಧೀರೂಬಾಯಿ ಅಂಬಾನಿ ಅವರು ನಿಧನರಾದ ಬಳಿಕ ರಿಲಯನ್ಸ್ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.