ADVERTISEMENT

ಆದಾಯ ಮೂಲ ಹೆಚ್ಚಿಸಿಕೊಳ್ಳಲು ಪಾಲಿಕೆಗಳಿಗೆ ಆರ್‌ಬಿಐ ಸಲಹೆ

ಪಿಟಿಐ
Published 14 ನವೆಂಬರ್ 2024, 15:29 IST
Last Updated 14 ನವೆಂಬರ್ 2024, 15:29 IST
<div class="paragraphs"><p>ಆರ್‌ಬಿಐ</p></div>

ಆರ್‌ಬಿಐ

   

ಸಾಂಕೇತಿಕ ಚಿತ್ರ 

ಮುಂಬೈ: ಮಹಾನಗರ ಪಾಲಿಕೆಗಳು ತಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಸಲಹೆ ನೀಡಿದೆ.

ADVERTISEMENT

ಆಸ್ತಿ ತೆರಿಗೆ, ಬಳಕೆದಾರರ ಶುಲ್ಕದ ಹೊಂದಾಣಿಕೆ ಮತ್ತು ಉತ್ತಮ ತೆರಿಗೆ ಸಂಗ್ರಹ  ಪದ್ಧತಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಹೆಚ್ಚು ಆದಾಯ ಸಂಗ್ರಹಕ್ಕೆ ಒತ್ತು ನೀಡಬೇಕು ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ಮಹಾನಗರ ಪಾಲಿಕೆ ಹಣಕಾಸು ವರದಿ ತಿಳಿಸಿದೆ.

ನಗರ ಪ್ರದೇಶದಲ್ಲಿ ಜನಸಂಖ್ಯೆಯು ಕ್ಷಿಪ್ರವಾಗಿ ಬೆಳೆಯುತ್ತಿದೆ. ನಗರದ ವಾಸಿಗಳಿಗೆ ಗುಣಮಟ್ಟದ ಸೇವೆ ಒದಗಿಸಬೇಕಿದೆ. ಇದಕ್ಕಾಗಿ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಹೇಳಿದೆ.

ಪ್ರಸ್ತುತ ದೇಶದಲ್ಲಿರುವ ಮಹಾನಗರ ಪಾಲಿಕೆಗಳ ಆದಾಯ ಸಂಗ್ರಹ ಕಡಿಮೆ ಪ್ರಮಾಣದಲ್ಲಿದೆ. ತಮ್ಮ ಕಾರ್ಯಾಚರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಪ್ರಮಾಣದ ನಿಧಿ ಪಡೆಯುತ್ತಿವೆ ಎಂದು ತಿಳಿಸಿದೆ.

ರಾಜ್ಯ ಸರ್ಕಾರಗಳು ತೆರಿಗೆ ಪದ್ಧತಿಯನ್ನು ಸುಧಾರಣೆ ಮಾಡುವ ಮೂಲಕ ಪಾಲಿಕೆಗಳ ಹಣಕಾಸು ಸ್ಥಿತಿಯನ್ನು ಬಲವರ್ಧನೆಗೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದೆ.

2023–24ನೇ ಸಾಲಿನ ಬಜೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರವು, ಆ ರಾಜ್ಯದಲ್ಲಿರುವ ಪಾಲಿಕೆಗಳಿಗೆ ₹11,104 ಕೋಟಿ ಅನುದಾನವನ್ನು ಹಂಚಿಕೆ ಮಾಡಿದೆ. ಇದೇ ವರ್ಷದಲ್ಲಿ ಗುಜರಾತ್‌, ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ ಮತ್ತು ತೆಲಂಗಾಣವು ತಲಾ ₹1 ಸಾವಿರ ಕೋಟಿಗೂ ಹೆಚ್ಚು ಹಂಚಿಕೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.