ಬೆಂಗಳೂರು: ‘ಪ್ರಸಕ್ತ ವರ್ಷ ಭಾರತದಲ್ಲಿ 75 ಸಾವಿರ ಮಹಿಳೆಯರಿಗೆ ಮಾಹಿತಿ ತಂತ್ರಜ್ಞಾನ ಕುರಿತ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ’ ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನ ವಲಯದಲ್ಲಿ ಲಿಂಗ ಅಸಮಾನತೆ ನಿರ್ಮೂಲನೆಗಾಗಿ ಮೈಕ್ರೊಸಾಫ್ಟ್ ಕಂಪನಿಯು ‘ಕೋಡ್; ವಿಥೌಟ್ ಬ್ಯಾರಿಯರ್’ ಕಾರ್ಯಕ್ರಮ ರೂಪಿಸಿದೆ.
ನಗರದಲ್ಲಿ ಗುರುವಾರ ಮೈಕ್ರೊಸಾಫ್ಟ್ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದ ನಾದೆಲ್ಲಾ ಅವರು, ಭಾರತದಲ್ಲಿಯೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು. ಮಹಿಳೆಯರಲ್ಲಿ ತಾಂತ್ರಿಕ ಜ್ಞಾನದ ಬಗ್ಗೆ ಕೌಶಲ ಬೆಳೆಸಲು ಇದರಿಂದ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.