ADVERTISEMENT

ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿದ ನೌಕ್ರಿ.ಕಾಂ, 99 ಎಕರ್ಸ್‌ ಆ್ಯಪ್‌ಗಳು

ಪಿಟಿಐ
Published 2 ಮಾರ್ಚ್ 2024, 16:00 IST
Last Updated 2 ಮಾರ್ಚ್ 2024, 16:00 IST
ಗೂಗಲ್ ಪ್ಲೇ ಸ್ಟೋರ್
ಗೂಗಲ್ ಪ್ಲೇ ಸ್ಟೋರ್   

ನವದೆಹಲಿ: ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ್ದ ನೌಕ್ರಿ.ಕಾಂ, 99 ಎಕರ್ಸ್‌ ಸೇರಿದಂತೆ ಕೆಲವು ಅಪ್ಲಿಕೇಶನ್‌ಗಳನ್ನು (ಆ್ಯಪ್‌) ಮರುಸ್ಥಾಪಿಸಿದೆ.

ಭಾರತೀಯ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಹೊರತೆಗೆಯುವುದನ್ನು ಒಪ್ಪಲು ಆಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟ ಸೂಚನೆ ರವಾನಿಸಿದ ನಡುವೆಯೇ ಕಂಪನಿ ಈ ಕ್ರಮ ಕೈಗೊಂಡಿದೆ.

ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಖ್‌ಚಂದಾನಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಅನೇಕ ಇನ್ಫೋ ಎಡ್ಜ್ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ಗೆ ಮರಳಿವೆ ಎಂದು ಖಚಿತಪಡಿಸಿದ್ದಾರೆ.

ADVERTISEMENT

ಪ್ಲೇ ಸ್ಟೋರ್‌ನಿಂದ ಗೂಗಲ್, ಕೆಲವು ಆ್ಯಪ್‌ಗಳನ್ನು ಹೊರತೆಗೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗೂಗಲ್‌ ಹಾಗೂ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವ ಆ್ಯಪ್‌ ಡೆವಲಪರ್ಸ್‌ ಜೊತೆ ಮುಂದಿನ ವಾರ ಸರ್ಕಾರ ಸಭೆ ನಡೆಸಿ, ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ಕೇಂದ್ರ ಸಂವಹನ ಮತ್ತು ಐ.ಟಿ. ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.