ನವದೆಹಲಿ: ಗೇಮಿಂಗ್ ಕಂಪನಿ ನಜಾರಾ ಟೆಕ್ನಾಲಜೀಸ್‌ಗೆ ಒಟ್ಟು ₹1,120 ಕೋಟಿ ಜಿಎಸ್‌ಟಿ ಬಾಕಿಗೆ ಸಂಬಂಧಿಸಿದಂತೆ ಕೋಲ್ಕತ್ತದ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು ಷೋಕಾಶ್ ನೋಟಿಸ್ ನೀಡಿದೆ.
2017–18ರಿಂದ 2022–23ನೇ ಸಾಲಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ತನ್ನ ಅಂಗಸಂಸ್ಥೆಗಳಾದ ಓಪನ್ ಪ್ಲೇ ಟೆಕ್ನಾಲಜೀಸ್‌ಗೆ ₹845 ಕೋಟಿ ಮತ್ತು ಹಾಲಾಪ್ಲೇ ಟೆಕ್ನಾಲಜೀಸ್‌ಗೆ ₹274 ಕೋಟಿ ತೆರಿಗೆ ಬಾಕಿ ಸಂಬಂಧ ನೋಟಿಸ್ ನೀಡಲಾಗಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
ಈ ನೋಟಿಸ್‌ಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ತೆರಿಗೆ ತಜ್ಞರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಕಾನೂನು ಹೋರಾಟ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.