ADVERTISEMENT

ಕಾಫಿ ಡೇ ಗ್ಲೋಬಲ್ ವಿರುದ್ಧದ ಅರ್ಜಿ ಸ್ವೀಕರಿಸಿದ ಎನ್‌ಸಿಎಲ್‌ಟಿ

ಪಿಟಿಐ
Published 24 ಜುಲೈ 2023, 15:57 IST
Last Updated 24 ಜುಲೈ 2023, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜನಪ್ರಿಯ ‘ಕೆಫೆ ಕಾಫಿ ಡೇ’ ಮಳಿಗೆಗಳನ್ನು ಮುನ್ನಡೆಸುತ್ತಿರುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ (ಸಿಡಿಜಿಎಲ್) ವಿರುದ್ಧ ದಿವಾಳಿ ಸಂಹಿತೆಯ ಪ್ರಕಾರ ಕ್ರಮ ಜರುಗಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಪೀಠವು ವಿಚಾರಣೆಗೆ ಸ್ವೀಕರಿಸಿದೆ.

ಸಿಡಿಜಿಎಲ್‌ಗೆ ಸಾಲ ನೀಡಿರುವ ಕಂಪನಿಯೊಂದು, ತನಗೆ ₹94 ಕೋಟಿ ಬರಬೇಕಿದೆ ಎಂದು ಸಲ್ಲಿಸಿರುವ ಅರ್ಜಿಯನ್ನು ಎನ್‌ಸಿಎಲ್‌ಟಿ ವಿಚಾರಣೆಗೆ ಸ್ವೀಕರಿಸಿದೆ ಎಂದು ಸಿಡಿಜಿಎಲ್‌ನ ಮಾತೃಸಂಸ್ಥೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್‌) ಷೇರುಪೇಟೆಗೆ ಮಾಹಿತಿ ನೀಡಿದೆ.

ಸಿಡಿಜಿಎಲ್‌ ಕಂಪನಿಯು ಈ ಅರ್ಜಿಗೆ ಪ್ರತಿಯಾಗಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೂಡ ಷೇರುಪೇಟೆಗೆ ನೀಡಿರುವ ವಿವರಣೆಯಲ್ಲಿ ತಿಳಿಸಲಾಗಿದೆ. ಸಿಡಿಜಿಎಲ್‌ ಕಂಪನಿಯು ದೇಶದ 158 ನಗರಗಳಲ್ಲಿ 495 ಕೆಫೆಗಳನ್ನು ಹೊಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.