ADVERTISEMENT

₹2,000 ಮುಖಬೆಲೆಯ ಶೇ 50ರಷ್ಟು ನೋಟುಗಳು ಹಿಂದಕ್ಕೆ: ಆರ್‌ಬಿಐ

ಪಿಟಿಐ
Published 8 ಜೂನ್ 2023, 10:52 IST
Last Updated 8 ಜೂನ್ 2023, 10:52 IST
₹2000 ಮುಖಬೆಲೆಯ ನೋಟುಗಳು
₹2000 ಮುಖಬೆಲೆಯ ನೋಟುಗಳು    

ನವದೆಹಲಿ: ಚಲಾವಣೆಯಲ್ಲಿರುವ ₹2,000 ಮುಖಬೆಲೆಯ ಶೇಕಡಾ 50 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ.

ದ್ವೈಮಾಸಿಕ ಹಣಕಾಸು ನೀತಿಯನ್ನು ಬಿಡುಗಡೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನೋಟು ಹಿಂಪಡೆಯುವ ನಿರ್ಧಾರ ಘೋಷಣೆಯಾದ ನಂತರ ಇದುವರೆಗೆ ₹1.80 ಲಕ್ಷ ಕೋಟಿ ಹಣ ಹಿಂದಕ್ಕೆ ಬಂದಿದೆ’ ಎಂದು ಅವರು ಹೇಳಿದರು.

2023ರ ಮಾರ್ಚ್ 31ರ ವರೆಗೆ ₹3.62 ಲಕ್ಷ ಕೋಟಿ ಮೌಲ್ಯದ ₹2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಅವರು ಹೇಳಿದರು.

ADVERTISEMENT

ಶೇ.85ರಷ್ಟು ನೋಟುಗಳು ಬ್ಯಾಂಕ್ ಠೇವಣಿ ರೂಪದಲ್ಲಿ ಬಂದಿವೆ ಎಂದು ಶಕ್ತಿಕಾಂತ್‌ ದಾಸ್ ಹೇಳಿದರು.

ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಕರೆನ್ಸಿ ನಿರ್ವಹಣೆಯ ಭಾಗವಾಗಿ ₹2,000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಮೇ 23 ರಿಂದ ನೋಟುಗಳ ವಿನಿಯಮಯಕ್ಕೆ ಅನುಮತಿ ನೀಡಲಾಯಿತು. ವಿನಿಮಯ ಅಥವಾ ಠೇವಣಿ ವ್ಯವಸ್ಥೆ ಸೆಪ್ಟೆಂಬರ್ 30ರವರೆಗೆ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.