ADVERTISEMENT

ಜನರ ಬಳಿ ₹ 9,330 ಕೋಟಿ ಮೌಲ್ಯದ ₹ 2,000 ಮುಖಬೆಲೆ ನೋಟು

ಪಿಟಿಐ
Published 1 ಜನವರಿ 2024, 16:15 IST
Last Updated 1 ಜನವರಿ 2024, 16:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದಲ್ಲಿ ಚಲಾವಣೆಯಲ್ಲಿದ್ದ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇ 97.38ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿವೆ. ಜನರ ಬಳಿ ಇನ್ನೂ ₹9,330 ಕೋಟಿ ಮೌಲ್ಯದ ನೋಟುಗಳು ಉಳಿದಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.

ಈ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಆರ್‌ಬಿಐ ಮೇ 19ರಂದು ಹೇಳಿತ್ತು. ಅಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು ₹3.56 ಲಕ್ಷ ಕೋಟಿ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT