ADVERTISEMENT

MDH, ಎವರೆಸ್ಟ್‌ ಪದಾರ್ಥದಲ್ಲಿ ಕೀಟನಾಶಕ ಪತ್ತೆ ಪ್ರಕರಣ: ನೇ‍‍ಪಾಳದಲ್ಲೂ ನಿಷೇಧ

ಪಿಟಿಐ
Published 18 ಮೇ 2024, 14:39 IST
Last Updated 18 ಮೇ 2024, 14:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಠ್ಮಂಡು: ಎಂಡಿಎಚ್‌ ಹಾಗೂ ಎವರೆಸ್ಟ್‌ನ ಸಂಬಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶ ಪತ್ತೆಯಾಗಿರುವುರಿಂದ ನೆರೆಯ ನೇಪಾಳದಲ್ಲಿಯೂ ಈ ಕಂಪನಿಗಳ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ.

ಎಂಡಿಎಚ್‌ನ ಮದ್ರಾಸ್‌ ಕರಿ ಪೌಡರ್‌, ಸಂಬಾರ್‌ ಮಿಕ್ಸ್ಡ್‌ ಮಸಾಲ ಪೌಡರ್‌, ಮಿಕ್ಸ್ಡ್‌ ಮಸಾಲ ಕರಿ ಪೌಡರ್‌ ಹಾಗೂ ಎವರೆಸ್ಟ್‌ನ ಫಿಶ್‌ ಕರಿ ಮಸಾಲದಲ್ಲಿ ಕೀಟನಾಶಕ ಅಂಶವಿದೆ ಎಂದು ಹೇಳಲಾಗಿದೆ. ಹಾಗಾಗಿ, ಅವುಗಳ ಖರೀದಿ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ನೇ‍ಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆ ತಿಳಿಸಿದೆ.

ADVERTISEMENT

ಸಂಬಾರ ಪದಾರ್ಥಗಳಲ್ಲಿ ಕೀಟನಾಶಕ ಅವಶೇಷ ಇರಬೇಕಾದ ಪ್ರಮಾಣದ ಮಿತಿಗಿಂತಲೂ ಹೆಚ್ಚಿದೆ. ಮಾಧ್ಯಮಗಳಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ಹಾಗಾಗಿ, ಮಾನವನ ದೇಹಕ್ಕೆ ಈ ಉತ್ಪನ್ನಗಳಿಂದ ಅಪಾಯ ಹೆಚ್ಚಿದೆ.  ಆಮದುದಾರರು ಮತ್ತು ವ್ಯಾಪಾರಿಗಳು ಕೂಡಲೇ ಮಾರುಕಟ್ಟೆಯಿಂದ ಈ ಪದಾರ್ಥಗಳನ್ನು ಹಿಂಪಡೆಯಬೇಕು ಎಂದು ಸೂಚಿಸಿದೆ.

ಕಳೆದ ತಿಂಗಳು ಹಾಂಗ್‌ಕಾಂಗ್‌ ಮತ್ತು ಸಿಂಗಪುರದಲ್ಲಿ ಈ ಪದಾರ್ಥಗಳಿಗೆ ನಿಷೇಧ ಹೇರಲಾಗಿದೆ.

ಭಾರತೀಯ ಸಂಬಾರ ಪದಾರ್ಥಗಳ ಮಂಡಳಿಯ ವರದಿ ಪ್ರಕಾರ, ಭಾರತವು ಜಾಗತಿಕ ಮಟ್ಟದಲ್ಲಿ ಸಂಬಾರ ಪದಾರ್ಥಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಮುಂಚೂಣಿಯಲ್ಲಿದೆ. 200ಕ್ಕೂ ಹೆಚ್ಚು  ಪದಾರ್ಥಗಳು ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು 180 ದೇಶಗಳಿಗೆ ರವಾನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.