ADVERTISEMENT

ನೆಸ್ಲೆ ಇಂಡಿಯಾಗೆ ₹934 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 12:13 IST
Last Updated 25 ಏಪ್ರಿಲ್ 2024, 12:13 IST
.....
.....   

ನವದೆಹಲಿ: ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕಾ ಕಂಪನಿಯಾದ ನೆಸ್ಲೆ ಇಂಡಿಯಾವು, 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹934 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರಲ್ಲಿ ಇದೇ ಅವಧಿಯಲ್ಲಿ ₹737 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 27ರಷ್ಟು ಏರಿಕೆಯಾಗಿದೆ. ವರಮಾನವು ₹4,830 ಕೋಟಿಯಿಂದ ₹5,627 ಕೋಟಿಗೆ ಹೆಚ್ಚಳವಾಗಿದೆ ಎಂದು ಕಂಪನಿಯು ಗುರುವಾರ ಷೇರುಪೇಟೆಗೆ  ತಿಳಿಸಿದೆ.

‘ಮಾರುಕಟ್ಟೆಯಲ್ಲಿ ಕಂಪನಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ, ಆಹಾರ ಹಣದುಬ್ಬರ ಮತ್ತು ಸರಕುಗಳ ಬೆಲೆ ಏರಿಕೆ ನಡುವೆಯೂ ಲಾಭದಲ್ಲಿ ಎರಡಂಕಿ ದಾಟಲು ಸಾಧ್ಯವಾಗಿದೆ’ ಎಂದು ನೆಸ್ಲೆ ಇಂಡಿಯಾ ಅಧ್ಯಕ್ಷ ಸುರೇಶ್‌ ನಾರಾಯಣನ್ ಹೇಳಿದ್ದಾರೆ.

ADVERTISEMENT

ಮಾರ್ಚ್‌ ತ್ರೈಮಾಸಿಕದಲ್ಲಿ ದೇಶೀಯ ಮಾರಾಟವು ₹5 ಸಾವಿರ ಕೋಟಿ ದಾಟಿದ್ದು, ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.

ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಜೊತೆಗೆ ಜಂಟಿಯಾಗಿ ಪೋಷಣ ಖಾದ್ಯಭರಿತ ಆಹಾರ ಪದಾರ್ಥಗಳ (ನ್ಯೂಟ್ರಾಸ್ಯುಟಿಕಲ್‌) ಮಾರಾಟಕ್ಕೆ ನೆಸ್ಲೆ ಕಂಪನಿಯ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.