ನವದೆಹಲಿ: ನೆಸ್ಲೆ ಕಂಪನಿಯು 2025ರ ಒಳಗಾಗಿ ಭಾರತದಲ್ಲಿ ₹ 5 ಸಾವಿರ ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದು ಸಿಇಒ ಮಾರ್ಕ್ ಶ್ನೇಯ್ಡರ್ ಶುಕ್ರವಾರ ತಿಳಿಸಿದ್ದಾರೆ.
ಹೊಸ ಘಟಕಗಳ ಸ್ಥಾಪನೆ, ಸ್ವಾಧೀನ ಮತ್ತು ವಿಸ್ತರಣೆಯ ಉದ್ದೇಶದಿಂದ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಕಂಪನಿಯು ಸದ್ಯ ದೇಶದಾದ್ಯಂತ 9 ಘಟಕಗಳನ್ನು ಹೊಂದಿದ್ದು, ತಯಾರಿಕಾ ಘಟಕ ಸ್ಥಾಪನೆಗಾಗಿ ಜಾಗದ ಹುಡುಕಾಟದಲ್ಲಿದೆ.
1960ರಲ್ಲಿ ಭಾರತದಲ್ಲಿ ತಯಾರಿಕೆ ಆರಂಭಿಸಿದಾಗಿನಿಂದ ₹ 8 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ಇದಲ್ಲದೆ, 2025ರ ಒಳಗಾಗಿ ₹ 5 ಸಾವಿರ ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.