ನವದೆಹಲಿ: ಕೇಂದ್ರ ಸರ್ಕಾರದ ಮಾಲೀಕತ್ವದ ಕಂಪನಿಗಳಿಗೆ ಅನ್ವಯ ಆಗುವಂತೆ ಹೊಸ ನೀತಿಯೊಂದು ಜಾರಿಗೆ ಬಂದಿದೆ. ಈ ನೀತಿಯ ಪ್ರಕಾರ, ಕೇಂದ್ರ ಸರ್ಕಾರದ ಕಂಪನಿಗಳು ಷೇರುದಾರರಿಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಡಿವಿಡೆಂಡ್ ಪಾವತಿಸಬೇಕು.
‘ಡಿವಿಡೆಂಡ್ ಕೊಡುವುದರಲ್ಲಿ ಸ್ಥಿರತೆ ಇರಬೇಕು ಎನ್ನುವ ನೀತಿಯನ್ನು ನಾವು ಪ್ರಕಟಿಸಿದ್ದೇವೆ. ಡಿವಿಡೆಂಡ್ ಪಾವತಿಸಲು ವರ್ಷದ ಕೊನೆಯವರೆಗೂ ಕಾಯಬೇಕಿಲ್ಲ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
ಹಾಲಿ ಆರ್ಥಿಕ ವರ್ಷದಲ್ಲಿ ಕೂಡ ಹಲವು ಕಂಪನಿಗಳು ಮಧ್ಯಂತರ ಡಿವಿಡೆಂಡ್ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.