ADVERTISEMENT

ಪೇಟಿಎಂ ಫಾಸ್ಟ್ಯಾಗ್‌ ಬದಲಿಗೆ ಸೂಚನೆ

ಪಿಟಿಐ
Published 13 ಮಾರ್ಚ್ 2024, 15:53 IST
Last Updated 13 ಮಾರ್ಚ್ 2024, 15:53 IST
..
..   

ನವದೆಹಲಿ: ಪೇಟಿಎಂ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸಿರುವ ಹೆದ್ದಾರಿ ಬಳಕೆದಾರರು ಮಾರ್ಚ್‌ 15ರೊಳಗೆ ಬೇರೆ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್‌ ಖರೀದಿಸುವುದು ಒಳಿತು. ಇದರಿಂದ ಟೋಲ್ ಪ್ಲಾಜಾಗಳಲ್ಲಿ ತೊಂದರೆ ಅನುಭವಿಸುವುದು ತಪ್ಪಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.

ಇತರೆ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್‌ ಖರೀದಿಸಿದರೆ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವೇಳೆ ದಂಡ ಅಥವಾ ಎರಡು ಬಾರಿ ಹಣ ಪಾವತಿಯಂತಹ ಸಮಸ್ಯೆ ಎದುರಾಗುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಹೇಳಿದೆ. 

ಮಾರ್ಚ್‌ 15ರ ಬಳಿಕ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ (ಪಿಪಿಬಿಎಲ್‌) ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚಿಸಿದೆ. ಈ ಗಡುವಿನ ಬಳಿಕ ಪೇಟಿಎಂ ಬಳಕೆದಾರರ ಖಾತೆಗಳು, ಪ್ರೀಪೇಯ್ಡ್‌ ಪೇಮೆಂಟ್‌, ವ್ಯಾಲೆಟ್‌ ಮತ್ತು ಫಾಸ್ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್‌ ಅಪ್‌ಗಳನ್ನು ಸ್ವೀಕರಿಸುವಂತಿಲ್ಲ ಎಂದು ಸೂಚಿಸಿದೆ. 

ADVERTISEMENT

ಆದರೆ ಉಳಿತಾಯ ಖಾತೆ, ಚಾಲ್ತಿ ಖಾತೆ, ಪ್ರಿಪೇಯ್ಡ್, ಫಾಸ್ಟ್ಯಾಗ್‌, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನಲ್ಲಿ ಇರುವ ಬಾಕಿ ಹಣ ಹಿಂಪಡೆಯಲು ಅಥವಾ ಬಳಸುವುದಕ್ಕೆ ಈ ಗಡುವಿನ ನಂತರವೂ ಪೇಟಿಎಂ ಬ್ಯಾಂಕ್‌ ಬಳಕೆದಾರರಿಗೆ ಅನುಮತಿ ನೀಡಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಹೆದ್ದಾರಿ ಬಳಕೆದಾರರು ತಮ್ಮ ಖಾತೆಯಲ್ಲಿ ಉಳಿದಿರುವ ಬಾಕಿ ಹಣವನ್ನು ಟೋಲ್‌ ಪಾವತಿಗೂ ಬಳಸಬಹುದಾಗಿದೆ ಎಂದು ತಿಳಿಸಿದೆ.

‘ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯ (ಐಎಚ್‌ಎಂಸಿಎಲ್) ವೆಬ್‌ಸೈಟ್‌ನಲ್ಲಿಯೂ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇಲ್ಲಿಯೂ ಪರಿಶೀಲಿಸಬಹುದಾಗಿದೆ’ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.