ADVERTISEMENT

ಮುಂಬೈ: ವಾರದಲ್ಲಿ ಸೆನ್ಸೆಕ್ಸ್‌ 963 ಅಂಶ ಏರಿಕೆ

ಪಿಟಿಐ
Published 5 ಜುಲೈ 2024, 14:36 IST
Last Updated 5 ಜುಲೈ 2024, 14:36 IST
,,,,,,,,
,,,,,,,,   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. 

21 ಅಂಶ ಏರಿಕೆ ಕಂಡು 24,323 ಅಂಶಗಳಲ್ಲಿ ಸ್ಥಿರಗೊಂಡಿತು. ನಿಫ್ಟಿ 50ರ ಗುಚ್ಛದ ಪೈಕಿ 34 ಕಂಪನಿಗಳ ಷೇರಿನ ಮೌಲ್ಯ ಏರಿಕೆ ಕಂಡಿದೆ. 16 ಕಂ‍‍ಪನಿಗಳ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.  

ಮುಂಬೈ ಷೇರುಪೇಟೆ ಸೂಚ್ಯಂಕ 53 ಅಂಶ ಇಳಿಕೆ ಕಂಡು 79,996 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. 

ADVERTISEMENT

ಒಂದು ವಾರದಲ್ಲಿ ಸೆನ್ಸೆಕ್ಸ್‌ 963 ಅಂಶ (ಶೇ 1.21ರಷ್ಟು) ಹಾಗೂ ನಿಫ್ಟಿ 313 ಅಂಶ ಏರಿಕೆ ಕಂಡಿವೆ.  

‘ಆರಂಭಿಕ ವಹಿವಾಟಿನಿಂದಲೂ ಇಳಿಕೆ ದಾಖಲಿಸಿದ್ದ ನಿಫ್ಟಿ ವಹಿವಾಟಿನ ಅಂತ್ಯದಲ್ಲಿ ಏರಿಕೆ ಕಂಡಿತು’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್ ಸರ್ವಿಸಸ್‌ ಲಿಮಿಟೆಡ್‌ನ ರಿಟೇಲ್‌ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರಿಸ್‌ ಷೇರಿನ ಮೌಲ್ಯ ಶೇ 3ರಷ್ಟು ಹಾಗೂ ರೇಮಂಡ್‌ ಕಂಪನಿಯ ಷೇರಿನ ಮೌಲ್ಯದಲ್ಲಿ ಶೇ 10ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.