ನಿಸಾನ್ ಇಂಡಿಯಾ ಕಂಪನಿಯ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಇದೇ 16ರಂದು ಅನಾವರಣಗೊಳ್ಳಲಿದೆ. ಹೊಸ ಎಸ್‌ಯುವಿ ಹೇಗಿರಲಿದೆ ಎನ್ನುವ ಬಗ್ಗೆ ಕಂಪನಿಯು ಟೀಸರ್‌ನಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.
ಕಂಪನಿಯ ಮೊದಲ ಕಾಂಪ್ಯಾಕ್ಟ್ ಬಿ–ಎಸ್‌ಯುವಿಯನ್ನು ಜಪಾನ್‌ನಲ್ಲಿ ಇರುವ ಕೇಂದ್ರ ಕಚೇರಿಯಲ್ಲಿ ಅನಾವರಣ ಮಾಡುವುದಾಗಿ ಕಂಪನಿ ತಿಳಿಸಿದೆ.
ಅತ್ಯಾಕರ್ಷಕವಾದ ಹೆಡ್ ಲೈಟ್‌ಗಳು, ಆಧುನಿಕ ತಂತ್ರಜ್ಞಾನ ಮತ್ತು ವಿನೂತನ ವಿನ್ಯಾಸದೊಂದಿಗೆ ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಕಂಪನಿ ತಿಳಿಸಿದೆ.
ನಿಸಾನ್‌ನ ಜಾಗತಿಕ ಎಸ್‌ಯುವಿ ಪರಂಪರೆ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಅನ್ನು ಭವಿಷ್ಯದ ಪ್ರಯಾಣಕ್ಕೆ ಅನುಕೂಲಕರವಾದ ವೈಶಿಷ್ಟ್ಯತೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಗ್ರಾಹಕರಿಗೆ ಸ್ಟೈಲಿಶ್ ವಿನ್ಯಾಸ ಮತ್ತು ಡೈನಾಮಿಕ್ ರೋಡ್ ಪ್ರೆಸೆನ್ಸ್ ನೀಡಲಿದೆ. ಹೊಸ ಎಸ್‌ಯುವಿ ನಿಸಾನ್ ಇಂಟಲಿಜೆಂಟ್ ಮೊಬಿಲಿಟಿಯ ಭಾಗವಾದ ಇತ್ತೀಚಿನ ತಂತ್ರಜ್ಞಾನ ಒಳಗೊಂಡಿರಲಿದೆ. ಭವಿಷ್ಯದ ವಾಹನಗಳು ಹೇಗಿರಬೇಕು ಎನ್ನುವ ದೂರದೃಷ್ಟಿ ಗಮನದಲ್ಲಿ ಇಟ್ಟುಕೊಂಡು ಇದರ ವಿನ್ಯಾಸ ರೂಪಿಸಲಾಗಿದೆ.
ಪಾತ್‌ಫೈಂಡರ್, ಆರ್ಮಡಾ, ಎಕ್ಸ್‌ಟ್ರಯಲ್, ಜ್ಯೂಕ್ ಮತ್ತು ಕಿಕ್ಸ್‌ನಂತಹ ಮಾದರಿಗಳು ಅಭಿವೃದ್ಧಿಗೊಂಡಿರುವಕಂಪನಿಯ ಜಾಗತಿಕ ಎಸ್‌ಯುವಿ ಡಿಎನ್‌ಎದಲ್ಲಿಯೇ ಈ ’ಬಿ–ಎಸ್‌ಯುವಿ’ ರೂಪುಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.