ಮಂಗಳೂರು: ನವ ಮಂಗಳೂರು ಬಂದರು ಮಂಡಳಿಯ (ಎನ್‌ಎಂಪಿಟಿ) ನೂತನ ಅಧ್ಯಕ್ಷರಾಗಿ ಕೊಚ್ಚಿ ಬಂದರಿನ ಉಪಾಧ್ಯಕ್ಷ ಎ.ವಿ. ರಮಣ್ ಅವರನ್ನು ನೇಮಕ ಮಾಡಲಾಗಿದೆ. ಅವರು ಡಾ.ಎಂ. ಬೀನಾ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.
ಎ.ವಿ. ರಮಣ್ ಅವರು ಈ ಹಿಂದೆ ಕೊಚ್ಚಿ ಬಂದರಿನ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 26 ವರ್ಷಗಳ ಸೇವಾನುಭವ ಹೊಂದಿರುವ ಅವರು, ಇಂಡಿಯನ್ ಪೋರ್ಟ್ ಅಸೋಸಿಯೇಷನ್ ಮುಖ್ಯ ಆಡಳಿತಾಧಿಕಾರಿಯಾಗಿ, ಇಂಡಿಯನ್ ಮರಿಟೈಮ್ ವಿಶ್ವವಿದ್ಯಾಲಯದ ಉಪ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.