ನವದೆಹಲಿ: ಹೊಸ ಹೂಡಿಕೆಯನ್ನು ತಡೆ ಹಿಡಿದಿರುವುದಾಗಿ ಹೇಳಿರುವ ಫ್ರಾನ್ಸ್‌ನ ಟೋಟಲ್ ಎನರ್ಜೀಸ್ ಕಂಪನಿಯ ಹೇಳಿಕೆಯು ಸಮೂಹದ ಕಾರ್ಯಾಚರಣೆ ಅಥವಾ ನಿಗದಿಪಡಿಸಿರುವ ಬೆಳವಣಿಗೆಯ ಗುರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅದಾನಿ ಸಮೂಹ ಹೇಳಿದೆ.
ಅದಾನಿ ಸಮೂಹದ ಹೂಡಿಕೆದಾರರ ಪೈಕಿ ಫ್ರಾನ್ಸ್ ಕಂಪನಿಯೂ ಒಂದಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪಾಲುದಾರ ಗೌತಮ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಈ ಕಂಪನಿ ತಿಳಿಸಿದೆ.
ಟೋಟಲ್ ಎನರ್ಜೀಸ್ ಜೊತೆಗಿನ ಚರ್ಚೆಯಲ್ಲಿ ಹೊಸದಾಗಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅದಾನಿ ಗ್ರೀನ್ ಎನರ್ಜಿ ಕಂಪನಿಯು (ಎಜಿಇಎಲ್) ಷೇರುಪೇಟೆಗೆ ತಿಳಿಸಿದೆ.
ಎಜಿಇಎಲ್‌ನಲ್ಲಿ ಟೋಟಲ್ ಎನರ್ಜೀಸ್ ಕಂಪನಿಯು ಶೇ 19.75ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ. ಅಲ್ಲದೆ, ಎಜಿಇಎಲ್ ಜೊತೆಗೂಡಿ ಸೌರ ಮತ್ತು ಪವನ ವಿದ್ಯುತ್ ಉತ್ಪಾದಿಸುವ ಮೂರು ಕಂಪನಿಗಳಲ್ಲಿ ಶೇ 50ರಷ್ಟು ಷೇರುಗಳನ್ನು ಹೊಂದಿದೆ.
ಅದಾನಿ ಟೋಟಲ್ ಗ್ಯಾಸ್ ಕಂಪನಿಯಲ್ಲಿ ಶೇ 37.4ರಷ್ಟು ಷೇರುಗಳನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.