ADVERTISEMENT

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ರಾಯಿಟರ್ಸ್
Published 11 ಅಕ್ಟೋಬರ್ 2024, 9:20 IST
Last Updated 11 ಅಕ್ಟೋಬರ್ 2024, 9:20 IST
   

ನವದೆಹಲಿ: ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸಿಎನ್‌ಬಿಸಿ-ಟಿವಿ 18 ಚಾನಲ್ ವರದಿ ಮಾಡಿದೆ.

ಇಂದು (ಶುಕ್ರವಾರ) ಟಾಟಾ ಟ್ರಸ್ಟ್​ಗಳ ಮಂಡಳಿ ಸಭೆ ನಡೆದಿದ್ದು, ಸರ್ವಾನುಮತದಿಂದ ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ನೋಯೆಲ್ ನೇವಲ್ ಟಾಟಾ ಅವರು ರತನ್‌ ಟಾಟಾ ಅವರ ಮಲ ಸೋದರ. ಈಗಾಗಲೇ ಅವರು ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಮಂಡಳಿಯಲ್ಲಿ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಟಾಟಾ ಟ್ರೆಂಟ್‌ನ ಅಧ್ಯಕ್ಷರು ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರೂ ಆಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.