ADVERTISEMENT

ಉತ್ಪಾದನೆ ಕುಸಿತ: ಚಹಾ ದುಬಾರಿ?

ಪಿಟಿಐ
Published 20 ಜೂನ್ 2024, 16:21 IST
Last Updated 20 ಜೂನ್ 2024, 16:21 IST
   

ಕೋಲ್ಕತ್ತ: ಪ್ರತಿಕೂಲ ಹವಾಮಾನವು ದೇಶದ ಚಹಾ ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಜೂನ್‌ ಅಂತ್ಯದ ವೇಳೆಗೆ ಉತ್ಪಾದನೆಯಲ್ಲಿ 60 ದಶಲಕ್ಷ ಕೆ.ಜಿಯಷ್ಟು ಕೊರತೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಚಹಾ ಮಂಡಳಿ ಅಂದಾಜಿಸಿದೆ.

ಮೊದಲ ಮತ್ತು ಎರಡನೇ ಹಂತದಲ್ಲಿ ಫಸಲು ನಷ್ಟ ಉಂಟಾಗಿದೆ. ಇದು ಉತ್ಪಾದಕರ ಆದಾಯಕ್ಕೂ ಪೆಟ್ಟು ನೀಡುವ ಸಾಧ್ಯತೆಯಿದೆ. ಉತ್ಪಾದನೆ ಇಳಿಕೆಯಾಗುವುದರಿಂದ ಚಹಾ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿರುವ ಚಹಾ ತೋಟಗಳು ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿವೆ. ಮೇ ತಿಂಗಳಿನಲ್ಲಿ ಮಳೆಯ ಕೊರತೆಯೊಂದಿಗೆ ಬಿಸಿಲಿನ ಝಳ ಹೆಚ್ಚಿತ್ತು. ಜೂನ್‌ನಲ್ಲಿ ಮಳೆ ಕೊರತೆ ಹಾಗೂ ಹೆಚ್ಚಿದ ತಾಪಮಾನವು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ತಿಳಿಸಿದೆ.

ADVERTISEMENT

ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಮೇ ತಿಂಗಳಿನಲ್ಲಿ ಚಹಾ ಉತ್ಪಾದನೆಯಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ ಶೇ 20 ಮತ್ತು ಶೇ 40ರಷ್ಟು ಕಡಿಮೆಯಾಗಿದೆಯೆಂದು ಟೀ ಎಸ್ಟೇಟ್‌ಗಳು ಅಂದಾಜಿಸಿವೆ ಎಂದು ಭಾರತೀಯ ಚಹಾ ಮಂಡಳಿ (ಟಿಎಐ) ಅಧ್ಯಕ್ಷ ಸಂದೀಪ್‌ ಸಿಂಘಾನಿಯಾ ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಚಹಾ ಉತ್ಪಾದಿಸುವ ಜಿಲ್ಲೆಗಳಲ್ಲಿ ಶೇ 50–80ರಷ್ಟು ಮತ್ತು ಅಸ್ಸಾಂನಲ್ಲಿ ಶೇ 10ರಿಂದ ಶೇ 30ರಷ್ಟು ಮಳೆ ಕೊರತೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.