ನವದೆಹಲಿ: ಭೀಮ್ ಯುಪಿಐ ಆ್ಯಪ್ ಬಳಸುವವರು ಡಿಜಿಟಲ್ ವಹಿವಾಟಿನಲ್ಲಿ ಏನಾದರೂ ಸಮಸ್ಯೆಯಾದರೆ ಮತ್ತು ಬಾಕಿ ಉಳಿದಿರುವ ವಹಿವಾಟಿನ ವಿವರ ತಿಳಿಯಲು ಮತ್ತು ದೂರು ದಾಖಲಿಸಲು ಹೊಸ ಫೀಚರ್ ಅನ್ನು ಪರಿಚಯಿಸಲಾಗುತ್ತಿದೆ.
ಎನ್‌ಪಿಸಿಐ ಈ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಆರ್‌ಬಿಐನ ಗ್ರಾಹಕ ಸ್ನೇಹಿ ವ್ಯವಸ್ಥೆಗೆ ಪೂರಕವಾಗಿ ಹೊಸ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದಿದೆ.
ಎನ್‌ಪಿಸಿಐ, ಭೀಮ್ ಯುಪಿಐ ಆ್ಯಪ್‌ನಲ್ಲಿ ಯುಪಿಐ-ಹೆಲ್ಪ್ ಎಂಬ ಆಯ್ಕೆಯನ್ನು ಪರಿಚಯಿಸಿದೆ. ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಭೀಮ್ ಯುಪಿಐ ಆ್ಯಪ್ ಸೇವೆ ಲಭ್ಯವಿದೆ.
ಯುಪಿಐ ಹೆಲ್ಪ್ ಆಯ್ಕೆ ಮೂಲಕ ಬಳಕೆದಾರರು ಬಾಕಿ ಉಳಿದಿರುವ ವಹಿವಾಟು, ದೂರು ದಾಖಲು, ಹಣ ಖಾತೆಯಿಂದ ಕಡೆತಗೊಂಡಿದ್ದರೆ ಮತ್ತು ಜಮೆಯಾಗಿಲ್ಲವಾದರೆ ಆ ಬಗ್ಗೆ ದೂರು ದಾಖಲಿಸಬಹುದು. ಗ್ರಾಹಕರು ಮಾತ್ರವಲ್ಲದೆ, ವ್ಯಾಪಾರಸ್ಥರಿಗೂ ದೂರು ದಾಖಲಿಸುವ ಆಯ್ಕೆಯನ್ನು ಭೀಮ್ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.