ADVERTISEMENT

ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು: NSE ವಿಶ್ವದಾಖಲೆ

ಪಿಟಿಐ
Published 5 ಜೂನ್ 2024, 15:39 IST
Last Updated 5 ಜೂನ್ 2024, 15:39 IST
..........
..........   

ನವದೆಹಲಿ: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಎನ್‌ಎಸ್‌ಇ) ಬುಧವಾರ ನಡೆದ ವಹಿವಾಟಿನಲ್ಲಿ 1,971 ಕೋಟಿ ಷೇರು ವಹಿವಾಟು ಪ್ರಕ್ರಿಯೆ ನಡೆದಿದ್ದು, ವಿಶ್ವ ದಾಖಲೆಯಾಗಿದೆ ಎಂದು ಎನ್‌ಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಶಿಶ್‌ಕುಮಾರ್ ಚೌಹಾಣ್ ತಿಳಿಸಿದ್ದಾರೆ.

‘ಒಂದೇ ದಿನದಲ್ಲಿ 1,971 ಕೋಟಿ ಆರ್ಡರ್‌ಗಳು ಮತ್ತು 28.55 ಟ್ರೇಡ್‌ಗಳನ್ನು ನಿರ್ವಹಣೆ ಮಾಡಲಾಗಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಷೇರು ಮಾರಾಟ ಮಾಡುವವರು ನಿರ್ದಿಷ್ಟ ಷೇರುಗಳನ್ನು ಮಾರಾಟಕ್ಕೆ ಇಡುವುದನ್ನು ಆರ್ಡರ್‌ ಬುಕ್‌ ಮಾಡುವುದು ಎಂದು ಕರೆಯಲಾಗುತ್ತದೆ. ಇಂತಹ ಷೇರುಗಳನ್ನು ಹೂಡಿಕೆದಾರರು ಖರೀದಿಸಿದರೆ ಅದು ಟ್ರೇಡ್ ಆದಂತೆ. ಅಲ್ಲಿಗೆ ಒಂದು ವಹಿವಾಟು ಮುಗಿಯುತ್ತದೆ. ಬುಧವಾರದಂದು 28.55 ಕೋಟಿ ವಹಿವಾಟುಗಳು ನಡೆದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.