ADVERTISEMENT

ಕಲ್ಲಿದ್ದಲು ಉತ್ಪಾದನೆ: ಶೇ 50ರಷ್ಟು ಏರಿಕೆ

ಪಿಟಿಐ
Published 1 ಏಪ್ರಿಲ್ 2024, 14:28 IST
Last Updated 1 ಏಪ್ರಿಲ್ 2024, 14:28 IST
NTPC
NTPC   

ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) ಹಿಂದಿನ ವರ್ಷಕ್ಕೆ ಹೋಲಿಸಿದರೆ 2023–24ರ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಸಾಗಣೆಯಲ್ಲಿ ಶೇ 55ರಷ್ಟು ಮತ್ತು ಉತ್ಪಾದನೆಯಲ್ಲಿ ಶೇ 50ರಷ್ಟು ಏರಿಕೆ ಕಂಡಿದೆ.

ಈ ಅವಧಿಯಲ್ಲಿ 3.41 ಕೋಟಿ ಟನ್‌ ಕಲ್ಲಿದ್ದಲು ಸಾಗಣೆ ಮತ್ತು 3.43 ಕೋಟಿ ಟನ್‌ ಉತ್ಪಾದನೆ ಆಗಿದೆ ಎಂದು ಕಂಪನಿ ತಿಳಿಸಿದೆ.

ಕಲ್ಲಿದ್ದಲು ಉತ್ಪಾದನೆಯಲ್ಲಿ ನಿರಂತರ ಬೆಳವಣಿಗೆ ಸಾಧಿಸಲು, ಎನ್‌ಟಿಪಿಸಿ ಹಲವಾರು ತಂತ್ರಗಳು ಮತ್ತು ತಂತ್ರಜ್ಞಾನಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಕಠಿಣ ಸುರಕ್ಷತಾ ಕ್ರಮಗಳ ಅಳವಡಿಕೆ, ಸುಧಾರಿತ ಗಣಿ ಯೋಜನೆ, ಯಾಂತ್ರೀಕರಣ, ತರಬೇತಿ ಮತ್ತು ನಿರಂತರ ಮೇಲ್ವಿಚಾರಣೆ ಸೇರಿವೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.