ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) 2023–24ರ ಹಣಕಾಸು ವರ್ಷದಲ್ಲಿ 40 ಸಾವಿರ ಕೋಟಿ ಯೂನಿಟ್ (400 ಬಿಲಿಯನ್) ವಿದ್ಯುತ್ ಉತ್ಪಾದಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ 39,900 ಕೋಟಿ ಯೂನಿಟ್ (399 ಬಿಲಿಯನ್) ವಿದ್ಯುತ್ ಉತ್ಪಾದನೆ ಆಗಿತ್ತು ಎಂದು ಕಂಪನಿ ತಿಳಿಸಿದೆ. 2023ರ ಸೆಪ್ಟೆಂಬರ್ 1ರಂದು ದಿನದ ಗರಿಷ್ಠ ಉತ್ಪಾದನೆ 142.8 ಕೋಟಿ ಯೂನಿಟ್ ದಾಖಲಿಸಿತ್ತು.
ಎನ್‌ಟಿಪಿಸಿ 75.4 ಗಿಗಾವಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ. ಆದರೆ, 5 ಗಿಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದದ ವಿದ್ಯುತ್ ಉತ್ಪಾದನೆ ಸೇರಿ, 18 ಗಿಗಾವಾಟ್ ಸಾಮರ್ಥ್ಯದಷ್ಟು ಸ್ಥಾವರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಇದೆ. 2032ರ ವೇಳೆಗೆ 60 ಗಿಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದದ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.