ADVERTISEMENT

ಎನ್‌ಟಿಪಿಸಿ ನಿವ್ವಳ ಲಾಭ ಶೇ 7ರಷ್ಟು ಇಳಿಕೆ

ಪಿಟಿಐ
Published 29 ಅಕ್ಟೋಬರ್ 2022, 11:02 IST
Last Updated 29 ಅಕ್ಟೋಬರ್ 2022, 11:02 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ನಿವ್ವಳ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 7ರಷ್ಟು ಇಳಿಕೆ ಕಂಡು ₹3,417 ಕೋಟಿಗೆ ತಲುಪಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹3,690 ಕೋಟಿ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ವೆಚ್ಚ ಹೆಚ್ಚಾಗಿರುವುದೇ ಲಾಭ ಇಳಿಕೆ ಆಗಲು ಕಾರಣ ಎಂದು ಕಂಪನಿ ತಿಳಿಸಿದೆ. ತ್ರೈಮಾಸಿಕದಲ್ಲಿ ಕಂಪನಿಯ ವೆಚ್ಚವು ₹ 33,095 ಕೋಟಿಯಿಂದ ₹44,681 ಕೋಟಿಗೆ ಏರಿಕೆ ಆಗಿದೆ. ತ್ರೈಮಾಸಿಕದಲ್ಲಿ ವರಮಾನವು ₹33,095 ಕೋಟಿಯಿಂದ ₹40 ಸಾವಿರ ಕೋಟಿಗೆ ಏರಿಕೆ ಆಗಿದೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.