ADVERTISEMENT

ಉಷ್ಣ ವಿದ್ಯುತ್‌ ಯೋಜನೆ: ಮಾರ್ಚ್ 20ರಂದು ಕರಣಪುರ ಘಟಕದ ಕಾರ್ಯಾಚರಣೆ

ಪಿಟಿಐ
Published 18 ಮಾರ್ಚ್ 2024, 15:55 IST
Last Updated 18 ಮಾರ್ಚ್ 2024, 15:55 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) ತನ್ನ ಎರಡನೇ ಘಟಕವಾದ ಉತ್ತರ ಕರಣಪುರನ ಸೂಪರ್ ಉಷ್ಣ ವಿದ್ಯುತ್‌ ಯೋಜನೆಯ ವಾಣಿಜ್ಯ ಕಾರ್ಯಾಚರಣೆಯನ್ನು ಮಾರ್ಚ್ 20ರಂದು ಪ್ರಾರಂಭಿಸಲಿದೆ.

ಎನ್‌ಟಿಪಿಸಿಯ ಉತ್ತರ ಕರಣಪುರ ಸೂಪರ್ ಉಷ್ಣ ವಿದ್ಯುತ್‌ ಯೋಜನೆಯು (ಎಸ್‌ಟಿಪಿಪಿ) ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರವಾಗಿದ್ದು, ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿದೆ ಎಂದು ಕಂಪನಿ ಷೇರುಪೇಟೆಗೆ ಸೋಮವಾರ ತಿಳಿಸಿದೆ.

ಇದರೊಂದಿಗೆ, ಎನ್‌ಟಿಪಿಸಿಯ ಸ್ವತಂತ್ರ ಮತ್ತು ಗುಂಪು ವಾಣಿಜ್ಯ ವಿದ್ಯುತ್‌ ಸಾಮರ್ಥ್ಯವು ಕ್ರಮವಾಗಿ 59,298 ಮೆಗಾವಾಟ್‌ ಮತ್ತು 75,418 ಮೆಗಾವಾಟ್‌ ಆಗಲಿದೆ. ಎನ್‌ಟಿಪಿಸಿ ಕೇಂದ್ರ ವಿದ್ಯುತ್‌ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಅತಿದೊಡ್ಡ ವಿದ್ಯುತ್ ಉತ್ಪಾದನೆ ಕಂಪನಿಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.