ADVERTISEMENT

₹ 2000 ಮುಖಬೆಲೆಯ ನೋಟುಗಳ ಸಂಖ್ಯೆ ಇಳಿಕೆ: ಆರ್‌ಬಿಐ

ಪಿಟಿಐ
Published 28 ಮೇ 2022, 1:16 IST
Last Updated 28 ಮೇ 2022, 1:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಚಲಾವಣೆಯಲ್ಲಿ ಇರುವ ₹ 2 ಸಾವಿರ ಮುಖಬೆಲೆಯ ನೋಟುಗಳ ಸಂಖ್ಯೆ ನಿಧಾನವಾಗಿ ಕಡಿಮೆ ಆಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

2020ರ ಮಾರ್ಚ್‌ ಅಂತ್ಯದಲ್ಲಿ ದೇಶದಲ್ಲಿ ಚಲಾವಣೆಯಲ್ಲಿ ಇದ್ದ ಒಟ್ಟು ಕರೆನ್ಸಿ ನೋಟುಗಳಲ್ಲಿ ₹ 2ಸಾವಿರ ಮುಖಬೆಲೆಯ ನೋಟುಗಳ ಸಂಖ್ಯೆ 274 ಕೋಟಿ. 2021ರ ಮಾರ್ಚ್‌ ಅಂತ್ಯದ ವೇಳೆಗೆ 245 ಕೋಟಿಗೆ ಇಳಿಕೆ ಕಂಡಿತು. 2022ರ ಮಾರ್ಚ್‌ ಅಂತ್ಯದಲ್ಲಿ 214 ಕೋಟಿಗೆ ಇಳಿಕೆ ಆಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಮೌಲ್ಯದ ಲೆಕ್ಕದಲ್ಲಿಯೂ ₹ 2 ಸಾವಿರ ಮುಖಬೆಲೆಯ ನೋಟುಗಳ ಪ್ರಮಾಣವು 2021ರಲ್ಲಿ ಶೇ 17.3 ಇದ್ದಿದ್ದು 2022ರಲ್ಲಿ ಶೇ 13.8ಕ್ಕೆ ಇಳಿಕೆ ಆಗಿದೆ.

ADVERTISEMENT

ಚಲಾವಣೆಯಲ್ಲಿ ಇರುವ ಎಲ್ಲಾ ಮುಖಬೆಲೆಯ ನೋಟುಗಳ ಸಂಖ್ಯೆಯು 2022ರ ಮಾರ್ಚ್‌ ಅಂತ್ಯದ ವೇಳೆಗೆ 12,437 ಕೋಟಿಯಿಂದ 13,053 ಕೋಟಿಗೆ ಏರಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹ 28.27 ಲಕ್ಷ ಕೋಟಿಯಿಂದ ₹ 31.05 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಅದು ತಿಳಿಸಿದೆ.

ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ (ಕೋಟಿಗಳಲ್ಲಿ)
ನೋಟು: 2021,2022
₹ 2,000:
245, 214
₹ 500:3,867,4,554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.