ಬೆಂಗಳೂರು: ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಅವರು 2021ನೇ ಸಾಲಿನ ‘ಇವೈ ವರ್ಷದ ಉದ್ಯಮಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೌಂದರ್ಯವರ್ಧಕ ಸಾಧನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆರಂಭಿಸಿದ ನೈಕಾ ದೇಶದ ಅತ್ಯಂತ ಲಾಭದಾಯಕ ನವೋದ್ಯಮಗಳಲ್ಲಿ ಒಂದಾಗಿದ್ದು, ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ಗೆ ತನ್ನ ವಹಿವಾಟನ್ನು ವಿಸ್ತರಿಸಿಕೊಂಡಿದೆ.
ಜೂನ್ 9ರಂದು ನಡೆಯಲಿರುವ ಇವೈ ಜಾಗತಿಕ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.