ADVERTISEMENT

ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುವ ಡೀಲರ್‌ಗಳ ಕಮಿಷನ್‌ ಏರಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 18:39 IST
Last Updated 29 ಅಕ್ಟೋಬರ್ 2024, 18:39 IST
ಪೆಟ್ರೋಲ್‌, ಡೀಸೆಲ್
ಪೆಟ್ರೋಲ್‌, ಡೀಸೆಲ್   

ನವದೆಹಲಿ (ಪಿಟಿಐ): ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಮಾಡುವ ಡೀಲರ್‌ಗಳಿಗೆ ನೀಡುವ ಮಾರಾಟದ ಕಮಿಷನ್‌ನನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಂಗಳವಾರ ಏರಿಕೆ ಮಾಡಿವೆ.

ಪ್ರತಿ ಲೀಟರ್‌ ಪೆಟ್ರೋಲ್‌ಗೆ 65 ಪೈಸೆ ಮತ್ತು ಪ್ರತಿ ಲೀಟರ್‌ ಡೀಸೆಲ್‌ಗೆ 44 ಪೈಸೆಯಷ್ಟು ಹೆಚ್ಚಳ ಮಾಡಿದ್ದು, ಅಕ್ಟೋಬರ್‌ 30ರಿಂದ ಈ ದರ ಹೆಚ್ಚಳ ಜಾರಿಗೆ ಬರಲಿದೆ. ಇದು ಚಿಲ್ಲರೆ ಇಂಧನ ಮಾರಾಟದ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಭಾರತೀಯ ತೈಲ ನಿಗಮ (ಐಒಸಿ) ‘ಎಕ್ಸ್‌’ನಲ್ಲಿ ತಿಳಿಸಿದೆ.

ಎಂಟು ವರ್ಷದ ಬಳಿಕ ಮೊದಲ ಬಾರಿಗೆ ಕಮಿಷನ್‌ನ್ನು ಪರಿಷ್ಕರಣೆ ಮಾಡಿವೆ.

ADVERTISEMENT

ಪ್ರಸ್ತುತ, ಡೀಲರ್‌ಗಳಿಗೆ ಪ್ರತಿ ಕಿಲೋ ಲೀಟರ್‌ಗೆ (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್) ₹1,868.14 ಕಮಿಷನ್‌ ಪಾವತಿಸಲಾಗುತ್ತದೆ. ಡೀಸೆಲ್‌ಗೆ ಪ್ರತಿ ಕಿಲೋ ಲೀಟರ್‌ಗೆ ₹1,389.35 ಕಮಿಷನ್‌ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.