ಬೆಂಗಳೂರು: ಇ–ಸ್ಕೂಟರ್ ತಯಾರಿಕಾ ಕಂಪನಿಯಾದ ಓಲಾ ಎಲೆಕ್ಟ್ರಿಕ್, ದೇಶದಾದ್ಯಂತ ಹೊಸದಾಗಿ 50ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ತೆರೆದಿದೆ ಎಂದು ಮೂಲಗಳು ತಿಳಿಸಿವೆ.
ಹಾಲಿ ಇರುವ ಮತ್ತು ಹೊಸ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಲು 500ಕ್ಕೂ ಹೆಚ್ಚು ಟೆಕ್ನಿಷಿಯನ್‌ಗಳನ್ನು ನೇಮಕ ಮಾಡಿಕೊಂಡಿದೆ. ತನ್ನ ಇ–ಸ್ಕೂಟರ್‌ಗಳ ರಿಪೇರಿ ಕಾರ್ಯವನ್ನು ಸುಗಮಗೊಳಿಸಲು ಈ ಕ್ರಮಕೈಗೊಂಡಿದೆ ಎಂದು ಹೇಳಿವೆ.
ಕೆಲವು ಕೇಂದ್ರಗಳಲ್ಲಿ ಗ್ರಾಹಕರಿಗೆ ಸಕಾಲದಲ್ಲಿ ಸೇವೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.