ಬೆಂಗಳೂರು: ಓಲಾ ಕಂಪನಿಯು ವಿದ್ಯುತ್ ಚಾಲಿತ ಕ್ಯಾಬ್‌ಗಳ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕಂಪನಿಯು ಇ.ವಿ. ಕ್ಯಾಬ್‌ಗಳ ಸೇವೆಯನ್ನು ಮೊದಲಿಗೆ ಪರೀಕ್ಷಾರ್ಥವಾಗಿ ಕೆಲವೇ ವಾರಗಳಲ್ಲಿ ಆರಂಭಿಸಲಿದೆ.
ಕಂಪನಿಯು ಒಟ್ಟು 10 ಸಾವಿರ ಇ.ವಿ. ಕ್ಯಾಬ್‌ಗಳ ಸೇವೆ ಒದಗಿಸುವ ಉದ್ದೇಶ ಹೊಂದಿದೆ ಎಂದು ಬುಧವಾರ ತಿಳಿಸಿದೆ. ಇ.ವಿ. ಕ್ಯಾಬ್ ಸೇವೆಗಳನ್ನು ಪಡೆಯುವವರಿಗೆ ಶೂನ್ಯ ಕ್ಯಾನ್ಸಲೇಷನ್ ಶುಲ್ಕ, ಶೇಕಡ 100ರಷ್ಟು ನಗದು ರಹಿತ ಪಾವತಿ ಸೌಲಭ್ಯಗಳನ್ನು ನೀಡಲಾಗುವುದು.
‘ಪರಿಸರ ಸ್ನೇಹಿ ಪ್ರಯಾಣದ ಅನುಭವವನ್ನು ನಾವು ಹಂತ ಹಂತವಾಗಿ ಒಟ್ಟು 50 ಕೋಟಿ ಭಾರತೀಯರಿಗೆ ಒದಗಿಸಲಿದ್ದೇವೆ’ ಎಂದು ಓಲಾ ಎಲೆಕ್ಟ್ರಿಕ್ ಕಂಪನಿಯ ಸಿಇಒ ಭವೀಶ್ ಅಗರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.