ADVERTISEMENT

₹ 7,614 ಕೋಟಿ ಹೂಡಿಕೆ ಮಾಡಲಿದೆ ಓಲಾ

ತಮಿಳುನಾಡಿನಲ್ಲಿ ಇ–ಕಾರು, ಸೆಲ್‌ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 17:55 IST
Last Updated 18 ಫೆಬ್ರುವರಿ 2023, 17:55 IST

ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿನ ಪೋಚಂಪಳ್ಳಿಯಲ್ಲಿ ಇರುವ ಓಲಾ ಫ್ಯೂಚರ್‌ ಫ್ಯಾಕ್ಟರಿಯ ಸಾಮರ್ಥ್ಯ ವಿಸ್ತರಣೆ ಮಾಡುವ ಮೂಲಕ ವಿದ್ಯುತ್‌ ಚಾಲಿತ ಕಾರು ಮತ್ತು ಲೀಥಿಯಂ ಸೆಲ್‌ ತಯಾರಿಕೆ ಮಾಡಲು ಐದು ವರ್ಷಗಳಲ್ಲಿ ₹7,614 ಕೋಟಿ ಹೂಡಿಕೆ ಮಾಡುವುದಾಗಿ ಓಲಾ ಎಲೆಕ್ಟ್ರಿಕ್‌ ಕಂಪನಿಯು ಶನಿವಾರ ತಿಳಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮತ್ತು ಓಲಾ ಎಲೆಕ್ಟ್ರಿಕ್‌ನ ಸಿಇಒ ಭವಿಷ್‌ ಅಗರ್ವಾಲ್‌ ಅವರ ಸಮ್ಮುಖದಲ್ಲಿ ಈ ಹೂಡಿಕೆ ಒಪ್ಪಂದಕ್ಕೆ ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಪ್ರೈವೇಟ್‌ ಲಿಮಿಟೆಡ್‌ ಮತ್ತು ತಮಿಳುನಾಡು ಸರ್ಕಾರ ಸಹಿ ಮಾಡಿವೆ.

ಹೂಡಿಕೆ ಮಾಡಲಿರುವ ಒಟ್ಟು ಮೊತ್ತದಲ್ಲಿ ಸೆಲ್‌ ತಯಾರಿಕೆಗೆ ₹5,114 ಕೋಟಿ ವೆಚ್ಚ ಆಗಲಿದೆ. ಉಳಿದ ₹2,500 ಕೋಟಿ ಮೊತ್ತವನ್ನು ಕಾರು ತಯಾರಿಕಾ ಘಟಕ ಸ್ಥಾಪನೆಗೆ ಬಳಸಲು ಕಂಪನಿ ಉದ್ದೇಶಿಸಿದೆ. ಇದರ ತಯಾರಿಕಾ ಸಾಮರ್ಥ್ಯವು ವಾರ್ಷಿಕ 1.4 ಲಕ್ಷ ಇರಲಿದೆ. ಈ ಹೂಡಿಕೆಯಿಂದಾಗಿ 3,111 ಜನರಿಗೆ ಉದ್ಯೋಗ ಸೃಷ್ಟಿಯಾಗುವ ಅಂದಾಜು ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.