ನವದೆಹಲಿ: ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 8ರಷ್ಟು ಏರಿಕೆ ಆಗಿದೆ.
ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹472.05 ಮತ್ತು ₹472.95ಕ್ಕೆ ಸ್ಥಿರಗೊಂಡಿತು. ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹2,279 ಕೋಟಿ ಸೇರ್ಪಡೆಯಾಗಿದ್ದು, ಕಂಪನಿಯ ಒಟ್ಟು ಎಂ–ಕ್ಯಾಪ್ ₹30,022 ಕೋಟಿಗೆ ಮುಟ್ಟಿದೆ.
ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಕಂಪನಿಯನ್ನು ₹8.34 ಲಕ್ಷ ಕೋಟಿಯನ್ನಾಗಿಸುವುದು (100 ಬಿಲಿಯನ್ ಡಾಲರ್) ಗುರಿಯಾಗಿದೆ ಎಂದು ಶನಿವಾರ ಹೇಳಿದ್ದರು. ಇದರಿಂದ ಷೇರಿನ ಮೌಲ್ಯ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.