ADVERTISEMENT

ಒನ್‌ಪ್ಲಸ್‌: ಜುಲೈ 26ರಿಂದ ಪಾಪ್-ಅಪ್ ಕಾರ್ಯಕ್ರಮ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 17:55 IST
Last Updated 25 ಜುಲೈ 2024, 17:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಜಾಗತಿಕ ಮೊಬೈಲ್ ತಂತ್ರಜ್ಞಾನ ಕಂಪನಿ ಒನ್‌ಪ್ಲಸ್‌, ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಹೊಸ ಒನ್‌ಪ್ಲಸ್‌ ನಾರ್ಡ್‌ 4 ಸ್ಮಾರ್ಟ್‌ಫೋನ್‌ ಅನ್ನು ಹೊರತಂದಿದೆ.

ಇದಕ್ಕಾಗಿ ಜುಲೈ 26ರಿಂದ 28ರ ವರೆಗೆ ಬೆಂಗಳೂರಿನ ಒನ್ ಪ್ಲಸ್ ಬುಲೆವಾರ್ಡ್ ಮತ್ತು ಹೈದರಾಬಾದ್‌ನ ಒನ್ ಪ್ಲಸ್ ನಿಜಾಮ್ ಪ್ಯಾಲೇಸ್‌ನಲ್ಲಿ ಒನ್-ಪ್ಲಸ್ ಮೆಟಲ್ವರ್ಸ್ ಹೆಸರಿನ ಪಾಪ್-ಅಪ್ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಈ ವೇಳೆ ಗ್ರಾಹಕರು ಕಾರ್ಯಾಚರಣೆಯಲ್ಲಿ ಇಲ್ಲದ ಫೋನ್‌ಗಳನ್ನು ನಾರ್ಡ್ 4ಯೊಂದಿಗೆ ಬದಲಿಸಿ ಒಟ್ಟು ಮೌಲ್ಯದ ಮೇಲೆ ₹2,000ರ ವರೆಗೆ ರಿಯಾಯಿತಿ ಪಡೆಯಬಹುದು. ಜೊತೆಗೆ, ₹4,999 ಮೌಲ್ಯದ ಬ್ಯಾಕ್ ಪ್ಯಾಕ್ ಸಹ ಉಚಿತವಾಗಿ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಜುಲೈ 26ರಂದು ಬೆಂಗಳೂರಿನ ಒನ್ ಪ್ಲಸ್ ಬುಲೆವಾರ್ಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸ್ಟಾಂಡ್-ಅಪ್ ಹಾಸ್ಯ ಕಲಾವಿದ ಕಣ್ಣನ್ ಗಿಲ್, ಜುಲೈ 27ರಂದು ನಟಿ ಶ್ರೀನಿಧಿ ಶೆಟ್ಟಿ ಹಾಗೂ ಜುಲೈ 27ರಂದು ಹೈದರಾಬಾದಿನ ಒನ್ ಪ್ಲಸ್ ನಿಜಾಮ್ ಪ್ಯಾಲೇಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೊಬೈಲ್‌ ಖರೀದಿಸುವ ಆಯ್ದ ಗ್ರಾಹಕರಿಗೆ ಈ ಸೆಲೆಬ್ರಿಟಿಗಳು ಒನ್‌ಪ್ಲಸ್ ನಾರ್ಡ್ 4 ಅನ್ನು ಅನ್‌ ಬಾಕ್ಸ್‌ ಮಾಡಲು ಸಹಾಯ ಮಾಡಲಿದ್ದಾರೆ.

‘ಭಾರತೀಯ ಗ್ರಾಹಕರಿಗಾಗಿ ಹೊಸ ನಾರ್ಡ್ 4 ಮೊಬೈಲ್‌ನ ಬಳಕೆಗೆ ಅವಕಾಶ ನೀಡುವುದರೊಂದಿಗೆ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್-ಅಪ್ ಕಾರ್ಯಕ್ರಮ ನಡೆಸಲು ಉತ್ಸುಕರಾಗಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಒನ್ ಪ್ಲಸ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಇಶಿತಾ ಗ್ರೋವರ್ ಹೇಳಿದ್ದಾರೆ.

ವಿಶೇಷತೆ ಏನು? 

* ಒನ್ ಪ್ಲಸ್ ನಾರ್ಡ್ 4ರ ದರ ₹29,999ರಿಂದ ಆರಂಭವಾಗಲಿದೆ

* 8/128 ಜಿಬಿ, 8/256 ಜಿಬಿ ಮತ್ತು 12/256 ಜಿಬಿ ಮೂರು ಮಾದರಿಗಳಲ್ಲಿ ಲಭ್ಯವಿದೆ

* ಒಬ್ಸಿಡಿಯನ್ ಮಿಡ್ನೈಟ್, ಮರ್ಕ್ಯುರಿಯಲ್ ಸಿಲ್ವರ್ ಮತ್ತು ಓಯಸಿಸ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ದೊರೆಯಲಿದೆ

* ಒನ್‌ಪ್ಲಸ್ ನಾರ್ಡ್ 4 ಸ್ನಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್ ಮತ್ತು 100W ಸೂಪರ್ ವೂಕ್ ಚಾರ್ಜಿಂಗ್‌ನೊಂದಿಗೆ ಬೃಹತ್ 5,500mAh ಬ್ಯಾಟರಿ ಒಳಗೊಂಡಿದೆ.

* ಕೇವಲ 28 ನಿಮಿಷಗಳಲ್ಲಿ ಪೂರ್ಣ ಚಾರ್ಜ್‌ ಆಗಲಿದೆ

* ಬಾಳಿಕೆ ಹೆಚ್ಚಿಸಲು, ನಾಲ್ಕು ವರ್ಷಗಳ OS ಮತ್ತು 6 ವರ್ಷಗಳ ಭದ್ರತಾ ನವೀಕರಣ ಸಿಗಲಿದೆ

ಹೆಚ್ಚಿನ ಮಾಹಿತಿಗೆ OnePlus.inಗೆ ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.